ಇಳಕಲ್ :ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪಾವನ ಧಾಮ ಕೇಂದ್ರದಿಂದ ಮಹಾ ಶಿವರಾತ್ರಿಯ ಅಂಗವಾಗಿ ಮುನ್ನಾ ದಿನ ಫೆ. 25 ಮಂಗಳವಾರದಂದು 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆಯನ್ನು ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹೂವಿನಿಂದ ಅಲಂಕರಿಸಲಾದ 12 ಜ್ಯೋತಿರ್ಲಿಂಗಗಳನ್ನು ತೆರೆದ ವಾಹನದ ಮೇಲೆ ಇಟ್ಟು ಬ್ರಹ್ಮಕುಮಾರಿ ಕೇಂದ್ರದಿಂದ ಪ್ರಾರಂಭಗೊಂಡು ಮೆರವಣಿಗೆಯನ್ನು ನಗರಸಭೆ ಅಧ್ಯಕ್ಷೆ ಸುಧಾರಾಣಿ ಮುರುಗೇಶ ಸಂಗಮ , ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಚಾಲನೆ ನೀಡಿದರು ಇದಕ್ಕು ಮುನ್ನ ಕೇಂದ್ರದಲ್ಲಿ ಜ್ಯೋತಿ ಬೆಳಗಿಸಿ ಶಿಬಿರಾರ್ಥಿಗಳನ್ನು ಉದ್ದೇಶ ಮಾತನಾಡಿದರು.
ಶೋಭಾ ಯಾತ್ರೆಯು ಪಾವನ ಭಾವನ ಪಾವನ ಧಾಮದ ಸಂಚಾಲಕಿ ಬಿ.ಕೆ. ಅನುಸೂಯಾ ಮೊದಲಾದವರು ಮೆರವಣಿಗೆ ನೇತೃತ್ವವನ್ನು ವಹಿಸಿದ್ದರು ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಶುಬ್ರ ವಸ್ತ್ರ ದಾರಿಗಳಾಗಿ ದಾರಿ ಉದ್ದಕ್ಕೂ ಭಕ್ತಿ ಗೀತೆಗಳು ಶಿವ ಭಜನೆ ಶಿವನ ಹಾಡುಗಳನ್ನು ಹಾಡುತ್ತಾ ಶ್ವೇತ ವರ್ಣದ ಉಡುಗೆ ಯೊಂದಿಗೆ ಶಿವನ ಭಜನೆ, ಶಿವನ ಹಾಡುಗಳು ಭಕ್ತಿಗೀತೆಗಳನ್ನು ಹಾಡುತ್ತಾ ಪುರಸಭೆ ಮುಂದೆ ಹಾಯ್ದು ಕಂಠಿ ವೃತ್ತ, ವಿಜಯಲಕ್ಷ್ಮಿ ಜುವೆಲರ್ಸ್, ರಾಮ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಗಾಂಧಿ ಚೌಕ್, ಬಸವಣ್ಣ ದೇವರ ಗುಡಿ, ತರಕಾರಿ ಮಾರುಕಟ್ಟೆ, ಗಾಯತ್ರಿ ಕಲ್ಯಾಣ ಮಂಟಪ, ಬನ್ನಿ ಕಟ್ಟಿ ಬನ್ನಿ ಕಟ್ಟಿ, ಹತ್ತನೇ ನಂಬರ್ ಶಾಲೆ, ಮಹಾಂತೇಶ ಚಿತ್ರಮಂದಿರ ಮಾರ್ಗವಾಗಿ ಕೇಂದ್ರಕ್ಕೆ ಬಂದು ತಲುಪಿದರು.
12 ಜ್ಯೋತಿರಾದ ಕೇದಾರನಾಥ ವಿಶ್ವನಾಥ ಸೋಮನಾಥ ಮಹಾಕಾಳೇಶ್ವರ ರಾಮೇಶ್ವರ ಮಲ್ಲಿಕಾರ್ಜುನ ನಾಗೇಶ್ವರ ಭಿಮಾಶಂಕರ ವೈದ್ಯನಾಥ ಗಣೇಯಯ ಈ ಎಲ್ಲಾ ಲಿಂಗಗಳನ್ನು ಇಟ್ಟುಕೊಂಡು ಸಂಚರಿಸಿ ದರು.




