ಮುಂಬೈ : ಜ.15ರಂದು ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ನಗರಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ಮೂಲದ 12ಕ್ಕೂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಹುಟ್ಟೂರಿಂದ ದೂರದ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲೇ ಬದುಕು ಕಟ್ಟಿಕೊಂಡಿರುವ ಕನ್ನಡಿಗರು ಈ ಬಾರಿಯ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ, ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.
ಗೆದ್ದವರು – ಬಂಟ್ವಾಳ ಸಜಿಪ ಮೂಲದ ಸಂತೋಷ್ ಜಿ. ಶೆಟ್ಟಿ ನವ ಪನ್ವೇಲ್‌ನಲ್ಲಿ ಗೆಲುವು
– ಮೀರಾ ಭಯಂದರ್‌ಗೆ ಅವಿಭಜಿತ ದ.ಕ. ಗೋಪಾಲ್ ಶೆಟ್ಟಿ, ಅಕ್ಷತಾ ಶೆಟ್ಟಿ ಆಯ್ಕೆ
– ನವಿ ಮುಂಬೈ ಪಾಲಿಕೆಗೆ ಉಡುಪಿಯ ಎರ್ಮಾಳುವಿನ ಸುರೇಶ್ ಗೋಪಾಲ್ ಶೆಟ್ಟಿ
– ಅದೇ ಊರಿನ ಮಲ್ಲೇಶ ಶೆಟ್ಟಿ ಕಲ್ಯಾಣ ನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ
– ಉಡುಪಿ ಕಟಪಾಡಿ ಮೂಲದ ಮೀನಾಕ್ಷಿ ರಾಜೇಂದ್ರ ಥಾಣೆ ನಗರ ಪಾಲಿಕೆಗೆ ಆಯ್ಕೆ
– ಉಡುಪಿಯ ಮೂಡುಬೆಳ್ಳೆಯ ಸಂತೋಷ್, ರಾಜೇಶ್ ಶೆಟ್ಟಿ ಸೋದರರು ಭಿವಾಂಡಿಯಿಂದ ಗೆಲುವು




