Ad imageAd image

ಬೆಳಗಾವಿ ವಿವಿಧೆಡೆ ತೆರೆಯಲಾಗಿದ್ದ 12 ಆರ್ ಒ ಪ್ಲಾಂಟ್ ಗಳು ತಾಂತ್ರಿಕ ಸಮಸ್ಯೆಯಿಂದ ಬಂದ್

Bharath Vaibhav
ಬೆಳಗಾವಿ ವಿವಿಧೆಡೆ ತೆರೆಯಲಾಗಿದ್ದ 12 ಆರ್ ಒ ಪ್ಲಾಂಟ್ ಗಳು ತಾಂತ್ರಿಕ ಸಮಸ್ಯೆಯಿಂದ ಬಂದ್
WhatsApp Group Join Now
Telegram Group Join Now

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೆಲವೆಡೆ ವರುಣನ ಸಿಂಚನವಾಗಿದ್ದರೆ ಮತ್ತೆ ಹಲವೆಡೆಗಳಲ್ಲಿ ಭೀಕರ ಬರಗಾಲ ಆವರಿಸಿದೆ. ಬೆಳಗಾವಿಯ ವಿವಿಧೆಡೆ ತೆರೆಯಲಾಗಿದ್ದ 12 ಆರ್ ಒ ಪ್ಲಾಂಟ್ ಗಳು ತಾಂತ್ರಿಕ ಸಮಸ್ಯೆಯಿಂದಾಗಿ ಬಂದ್ ಆಗಿವೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕಗಳು ಕಳೆದ ಮೂರು ವರ್ಷಗಳಿಂದ ತುಕ್ಕು ಹಿಡಿದಿವೆ.

ಬೆಳಗಾವಿಯ ಬಡಾಲ ಅಂಕಲಗಿ ಗ್ರಾಮಸ್ಥರು ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ. ಪ್ರತಿ ದಿನ ಮೈಲುಗಟ್ಟಲೆ ಹೋಗಿ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ. ರೈತರ ಜಮೀನುಗಳು ಬರದಿಂದಾಗಿ ಬಿರುಕು ಬಿಡುತ್ತಿವೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆರಂಭಿಸಿದ್ದ ನೀರಿನ ಘಟಕಗಳು ಬಂದ್ ಆಗಿವೆ. ಇಷೆಲ್ಲ ಸಮಸ್ಯೆಗಳಿಂದ ಜನರು ಪರಿತಪಿಸುತ್ತಿದ್ದರೂ ಕೂಡ ಮಹಾನಗರ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಗಳಿಂದ ನಿರ್ಮಿಸಿರುವ 14 ಆರ್ ಒ ಪ್ಲಾಂಟ್ ಗಳಲ್ಲಿ 12 ಮುಚ್ಚಲಾಗಿದೆ. ಮೂರು ವರ್ಷಗಳಿಂದ ಘಟಕ ಮುಚ್ಚಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಬೆಳಗಾವಿಯ ಬಹುತೇಕ ಗ್ರಾಮಗಳಲ್ಲಿ ನೀರಿನ ಸಂಕಷ್ಟ ಎದುರಾಗಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!