ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ತಂಡ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್ ಗಳಿಂದ ಮಣಿಸಿತು.
ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೇಂಟ್ಸ್ ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 203 ರನ್ ಗಳಿಸಿತು. ಬೃಹತ್ ಮೊತ್ತ ಗುರಿ ಹೊಂದಿದ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ಗೆ 191 ರನ್ ಗಳಿಸಲು ಮಾತ್ರ ಸಾಧ್ಯವಾಗಿ 12 ರನ್ ಗಳಿಂದ ಪರಾಭವಗೊಂಡಿತು.
ಸ್ಕೋರ್ ವಿವರ:
ಲಕ್ನೋ ಸೂಪರ್ ಗೇಂಟ್ಸ್ ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 203 (ಮಾರ್ಷ60 (31 ಎಸೆತ, 9 ಬೌಂಡರಿ, 2 ಸಿಕ್ಸರ್
ಮಾರ್ಕಮ್ 53 (38 ಎಸೆತ, 2 ಬೌಂಡರಿ 4 ಸಿಕ್ಸರ್, ಹಾರ್ಧಿಕ ಪಾಂಡ್ಯಾ 36 ಕ್ಕೆ 5)
ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆ 191 ( ಸೂರ್ಯ ಕುಮಾರ್ ಯಾದವ್ 67 ( 43 ಎಸೆತ, 9 ಬೌಂಡರಿ, 1 ಸಿಕ್ಸರ್) ನಮನ್ ಧೀರ 46 (24 ಎಸೆತ, 4 ಬೌಂಡರಿ, 3 ಸಿಕ್ಸರ್) ದಿಗ್ವೇಶ್ ರಾಠಿ 21 ಕ್ಕೆ 1
ಪಂದ್ಯ ಶ್ರೇಷ್ಠ: ದಿಗ್ವೇಶ ರಾಠಿ