ಚೇಳೂರು : ತಾಲ್ಲೂಕಿನಲ್ಲಿ ಇಂದು DSS ಜಿಲ್ಲಾ ಸಂಚಾಲಕರು ಹಾಗೂ ಸಮಾಜ ಸೇವಕರದಂತಹ ಕಡ್ಡಿಲ್ ವೆಂಕಟರಮಣ ರವರ ಹುಟ್ಟುಹಬ್ಬವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಾಗೂ ಅಭಿಮಾನಿಗಳೊಂದಿಗೆ ಸಿಹಿ ಹಾಗೂ ಕೇಕ್ ಕತ್ತರಿಸಿ ಸಂಭ್ರಮಿಸಿದರು, ನಂತರ ಕರ್ನಾಟಕ ಪಬ್ಲಿಕ್ ಮುಕ್ಯೋಪಾಧ್ಯಾಯರಾದ ಜಿಲಾನ್ ಭಾಷಾ ರವರು ಸನ್ಮಾನ ಮಾಡಿ ಶುಭ ಹಾರೈಸಿದರು,ಇದೇ ವೇಳೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ ಹಂಚಿದರು.
ಈ ಸಂದರ್ಭದಲ್ಲಿ ಕಡ್ಡಿಲ್ ವೆಂಕಟರಮಣ ರವರು ಹುಟ್ಟುಹಬ್ಬವನ್ನು ನಾನು ಬಡ ವಿದ್ಯಾರ್ಥಿಗಳಲ್ಲೆ ಮಾಡಿಕೊಳ್ಳುತೇನೆ ಅಲ್ಲದೇ ನಾನು 40 ವರ್ಷಗಳಿಂದ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುತ್ತೇನೆ ಎಂದು ತಮ್ಮ ಹಿತ -ನುಡಿಗಳನ್ನು ಹೇಳುವ ಮೂಲಕ ಭಾಷಣವನ್ನು ಮುಕ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಕ್ಯೋಪಾಧ್ಯಾಯರಾದ ಜಿಲಾನ್ ಭಾಷಾ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಕ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಇದೇ ವೇಳೆ ಹಾಜರಿದ್ದರು,ಅಲ್ಪಸಂಖ್ಯಾತ ಘಟಕದ ಯುವ ಮುಖಂಡರಾದ ಅಜಾರುದ್ದಿನ್, ಇಮ್ರಾನ್, ಖಾದಿರ್,ಅಭಿಮಾನಿಗಳು ಹಾಗೂ AYS ತಂಡದ ಶ್ರೀನಾಥ್, ಕಿರಣ್, ಕೆಪಿಸಿಸಿ ಉಪಾಧ್ಯಕ್ಷರಾದ ಪ್ರೆಮ್ ಕುಮಾರ್, ನವೀನ್, ಅಶೋಕ್, ಕುಮಾರ್, ರಾಜು, ಇನ್ನು ಹಲವರು ಇದೇ ವೇಳೆ ಹಾಜರಿದ್ದರು.




