ಪಂಚ ಗ್ಯಾರಂಟಿ ಯೋಜನೆಗಳಿಂದ ನೂರಾರು ಕುಟುಂಬಗಳಿಗೆ ಅನುಕೂಲವಾಗಿದೆ ಅದೇ ರೀತಿ ನಮ್ಮ ರಾಜ್ಯದ ಪಂಚಾ ಗ್ಯಾರಂಟಿ ಯೋಜನೆಗಳನ್ನು ಬೇರೆ ರಾಜ್ಯಗಳು ವಿಸ್ತರಿಸಿದೆ. ಎನ್ .ವೈ. ಪಿ.ಚೇತನ್.
ಮೊಳಕಾಲ್ಮೂರು: ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ಮತ್ತು ತಾಲೂಕಿನ ಎಲ್ಲಾ ಕಡುಬಡವರು ಗ್ಯಾರಂಟಿ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ತಾಲೂಕಿನ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್ ವೈ ಪಿ ಚೇತನ್ ರವರು ತಿಳಿಸಿದರು.

ಶುಕ್ರವಾರ ತಾಲೂಕಿನ ಹಮ್ಕುಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಡವರು ಕೂಲಿ ಕಾರ್ಮಿಕರು ಹಾಗೂ ಯುವಕರು ನಿರುದ್ಯೋಗಿಗಳಿಗೆ ಆಸರೆಯಾಗಿದೆ. ಈ ಯೋಜನೆಗಳಿಂದ ಅನೇಕ ಬಡ ಕುಟುಂಬದವರು ಜೀವನ ನಡೆಸುತ್ತಿದ್ದಾರೆ, ಇದಕ್ಕೆ ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಯೋಜನೆಗಳನ್ನು ಜನರಿಗೆ ಮುಟ್ಟುವ ಹಾಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಮತ್ತು ತಾಲೂಕಿನಲ್ಲಿ ಇದಕ್ಕೆ ಸಂಬಂಧಿಸಿದ ಸದಸ್ಯರುಗಳನ್ನು ನೇಮಕ ಮಾಡಿಕೊಂಡು ಈ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು, ಅದೇ ರೀತಿ ಸರ್ಕಾರ ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ ಓ ಎಚ್ ಹನುಮಂತಪ್ಪ ಮಾತನಾಡಿ, ನಮ್ಮ ತಾಲೂಕು ಆಡಳಿತ ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಸ್ತೃತವಾಗಿ ನಿಮ್ಮ ಬಳಿ ಚರ್ಚಿಸಲಿದ್ದಾರೆ, ಈ ಗ್ಯಾರೆಂಟಿ ಯೋಜನೆಗಳು ಕಟ್ಟೆ ಕಡೆಯ ವ್ಯಕ್ತಿಗೂ ಕೂಡ ತಲುಪಬೇಕು ಎನ್ನುವುದೇ ಸರ್ಕಾರದ ಉದ್ದೇಶವಾಗಿದೆ, ಕೆಲ ನ್ಯೂನತೆಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಪಂಚ ಗ್ಯಾರಂಟಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅದೇ ರೀತಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಧನಂಜಯ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ಬಡ ಕುಟುಂಬಗಳಿಗೆ ನಿರ್ಗತಿಕರಿಗೆ ಮಹಿಳೆಯರಿಗೆ ಸ್ವಾಭಿಲಂಬಿ ಜೀವನ ನಡೆಸಲು ಸಾಧ್ಯ ಅದೇ ರೀತಿ ಪಂಚ ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸದಸ್ಯರುಗಳು ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಿ ಡಿ ಪಿ ಓ ನವೀನ್ ಕುಮಾರ್, ಪಿಡಿಒ ಮಲ್ಲಿಕಾರ್ಜುನ ಪಂಚ ಗ್ಯಾರಂಟಿ ಯೋಜನೆಯ ಸದಸ್ಯರುಗಳಾದ ನರಸಿಂಹ ರೆಡ್ಡಿ ಪಾಲಯ್ಯ ವಿಜಯ್ ಪಲ್ಲವಿ,ಮೊಳಕಾಲ್ಮುರಿನ ಮಹಮ್ಮದ್ ರಫಿ. ಪಿ ಗೋಪಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ, ಉಪಾಧ್ಯಕ್ಷರಾದ ಗೀತಾ ಸದಸ್ಯರುಗಳಾದ ವಸಂತಮ್ಮ ಪ್ರಭಾಕರ್ ಮಂಜಮ್ಮ ಅಂಜಿನಪ್ಪ ವಸಂತಮ್ಮ ಹೊನ್ನೂರಪ್ಪ ವರಲಕ್ಷ್ಮಿ ಈರಣ್ಣ ಮಂಜುಳಾ ಮಲಿ ಅಕ್ಕ ಗೌರಮ್ಮ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಊರಿನ ಗ್ರಾಮಸ್ಥರು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




