Ad imageAd image

 ಸಾಹಿತ್ಯದಿಂದ ಕನ್ನಡ ಭಾಷೆ ಶ್ರೀಮಂತ

Bharath Vaibhav
 ಸಾಹಿತ್ಯದಿಂದ ಕನ್ನಡ ಭಾಷೆ ಶ್ರೀಮಂತ
WhatsApp Group Join Now
Telegram Group Join Now

ಗದಗ  : ಕನ್ನಡ ಲಿಪಿಗಳ ರಾಣಿ: ಶ್ರೀ ವೆಂಕಟೇಶ್ ಅರ್ಕಸಾಲಿ. ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲೆ ತಾಲೂಕ ಘಟಕ ಶಿರಹಟ್ಟಿ ಹಮ್ಮಿಕೊಂಡ “ಕನ್ನಡ ಸಂಭ್ರಮಾಚರಣೆ” ನಿಮಿತ್ಯ ಅವರು ಕನ್ನಡ ನಾಡು ನುಡಿ ಮಹತ್ವ ಕುರಿತು ಶ್ರೀ ಜಗದ್ಗುರು ಫಕೀರೇಶ್ವರ ಪ್ರೌಢಶಾಲೆ ಬೆಳ್ಳಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಅನೇಕ ಭಾಷೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನಮಾನವಿದೆ, ಅದಕ್ಕೆ ಅದನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಕನ್ನಡಕ್ಕೆ ತಾಯಿಯ ಸ್ಥಾನ ನೀಡಲಾಗಿದೆ. 2,500 ವರ್ಷಗಳ ಇತಿಹಾಸವಿರುವ ಕನ್ನಡದ ನೆಲ ಒಮ್ಮೆ ಹಿಗ್ಗಿ ಮತ್ತೊಮ್ಮೆ ಕುಗ್ಗಿ 1956 ರಲ್ಲಿ ಕನ್ನಡ ಭಾಷೆಯನ್ನು ಆಡುವ ರಾಜ್ಯವಾಯಿತು.

ಪ್ರಾಸ್ತಾವಿಕವಾಗಿ. :ಶ್ರೀ ಗಿರೇಶ ಕೊಡಬಾಳ ಮಾತಾಡೆದರು “ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ “ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಮಾತನಾಡುತ್ತಾ ತಾಲೂಕ ಘಟಕ ಶಿರಹಟ್ಟಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ನಾಡು,ನುಡಿಯ ಕುರಿತು ಇಂಥ ಉಪನ್ಯಾಸಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಬಗ್ಗೆ ಮತ್ತು ನೆಲ, ಜಲ, ಭಾಷೆ ಕುರಿತಾದ ಪ್ರಜ್ಞೆ ಬರುವುದು. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂದು ಹೇಳಿದರು. ಮುಖ್ಯೋಪಾಧ್ಯರಾದ ಶ್ರೀ ಎಚ್‌ ಟಿ ಬಿಜ್ಜೂರ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಗಣ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ “ಶ್ರೀ ನವೀನಕುಮಾರ ಅಳವಂಡಿ” ವಹಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದ್ದು ಭಾಷೆ, ನೆಲ, ಜಲ ವಿಚಾರದಲ್ಲಿ ನಮ್ಮನ್ನ ನಾವು ಎಂದಿಗೂ ಬಿಟ್ಟುಕೊಡಬಾರದು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶ್ರೀ ಬಿ ಎಂ ಯರಕದ, ಸಾಹಿತ್ಯ ಆಸಕ್ತರಾದ ಶ್ರೀ ಶಿವಯೋಗಿ ವಿಭೂತಿ, ಶರಣ ಸಾಹಿತ್ಯ ಪರಿಷತ್ ಹೋಬಳಿ ಘಟಕ ಬೆಳ್ಳಟ್ಟಿ ಅಧ್ಯಕ್ಷರಾದ ಶ್ರೀ ಎಂ ಬಿ ಹಾವೇರಿ, ಕಸಾಪ ಘಟಕದ ಕಾರ್ಯದರ್ಶಿಗಳಾದ ಶ್ರೀ ಸತೀಶ್ ದೇಶಪಾಂಡೆ, ಶಿಕ್ಷಕಿಯರಾದ ಶ್ರೀಮತಿ ಆರ್ ಎಂ ಬಳಬಟ್ಟಿ, ಶಿಕ್ಷಕರಾದ ಶ್ರೀ ಎಸ್ ಬಿ ತೆಳಗಿನಮನಿ, ಶ್ರೀ ಪ್ರಭುಸ್ವಾಮಿ,ಎಂ ಟಿ ತಳವಾರ ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕರಾದ ಶ್ರೀ ಎಸ್ ಬಿ ಮಳಲಿ ಸರ್ವರನ್ನು ಸ್ವಾಗತಿಸಿದರು, ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಯ ಕುರಿತಾದ ನೃತ್ಯಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕಿಯರಾದ ಶ್ರೀಮತಿ ಎನ್ ಎಸ್ ಸವಡಿ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಶ್ರೀ ವಿಷ್ಣು ಪವಾರ ಸರ್ವರನ್ನು ಅಭಿನಂದಿಸಿದರು..

ವರದಿ : ಅಣ್ಣಪ್ಪ ಗುತ್ತೆಮ್ಮನವರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!