ಸಿಂಧನೂರು : ತಾಲೂಕಿನ ಸುಕ್ಷೇತ್ರ ಸಿದ್ದ ಪರ್ವತದ ಅಂಬಾಮಠದ ಅಂಬಾ ಮಹೋತ್ಸವ ಜಾತ್ರೆ ಆರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದ್ದು ಜನವರಿ 3ರ ಬನದ ಹುಣ್ಣಿಮೆ ಯಂದು ಅಂಬಾಜಾತ್ರಾ ಮಹೋತ್ಸವ ಹಾಗೂ ಜನವರಿ 6ರಂದು ಮಹಾ ರಥೋತ್ಸವವು ನಡೆಯಲಿದ್ದು ಮಹಾ ರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಉಪಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ ಅವರಿಂದ ಚಾಲನೆ ನೀಡುತ್ತಿರುವುದು ವಿಶೇಷವಾಗಿದೆ ಜನವರಿ 6ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೇ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಾಣ ಮಹಾರಾಷ್ಟ್ರ ತಮಿಳುನಾಡು ರಾಜ್ಯಗಳಿಂದ 2ರಿಂದ 3 ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಮಹಾರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಸಚಿವರು ಸಂಸದರು ಶಾಸಕರು ವಿಧಾನ ಪರಿಷತ್ ಶಾಸಕರು ಆಗಮಿಸಲಿದ್ದು ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ 400 ಕೋಟಿ ರೂ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ
ವರದಿ : ಬಸವರಾಜ ಬುಕ್ಕನಹಟ್ಟಿ




