ಅಥಣಿ : ಮದಭಾವಿ ಗ್ರಾಮದ 22 ನೇ ವಯಸ್ಸಿನ ಯುವಕ ನಾಮದೇವ ಪಿಂಟು ಘಾಟಗೆ ಈತನು 5 ತಾಸಿನಲ್ಲಿ 14 ರಿಂದ 15 ಟನ್ ಕಬ್ಬು ಹೇರಿ ಅಚ್ಚರಿ ಮುಡಿಸಿದ್ದಾನೆ ಈತನಿಗೆ ಕರಿಯಪ್ಪ ಚಿಂಚಲಿ ಅನಿಲ್ ಕೋಳಿ ಕಬ್ಬು ಹೇರಲು ಸಾತು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಯ ಕಿಲಾರಿ ಅವರು ಮಾತನಾಡಿ ನಮ್ಮ ಗ್ರಾಮ ಯುವಕ 22ನೇ ವಯಸ್ಸಿನಲ್ಲಿ 5 ತಾಸಿನಲ್ಲಿ 14ರಿಂದ 15 ಟನ್ ಕಬ್ಬನ್ನು ಹೇರಿ ಸಾಧನೆ ಮಾಡಿರೋದು ನಮ್ಮೆಲ್ಲರಿಗೆ ಅಚ್ಚರಿ ಮೂಡಿಸಿದ್ದಾನೆ. ನಾಮದೇವ ಘಾಟಗೆ 22 ವಯಸ್ಸಿನಲ್ಲಿ ಕಬ್ಬು ಹೇರಿ ಸಾಧನೆ ಮಾಡಿದ್ದು ನಮ್ಮ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾನೆ ಇವನನ್ನು ಎಷ್ಟು ಹೊಗಳಿದರು ಕಡಿಮೆ ಎಂದರು.
ಕಬ್ಬು ಕಡಿಯುವ ಗ್ಯಾಂಗಿನಲಿ 15 ರಿಂದ 16 ಜನ ಸೇರಿ ಕಬ್ಬು ಕಡಿದು ಎಲ್ಲರೂ ಸೇರಿ ಮೂರು ತಾಸಿನಲ್ಲಿ ಕಬ್ಬ ತುಂಬಿದರೆ. ಮಾದೇವ್ ಘಾಟಗೆ ಎಂಬ 22 ವಯಸ್ಸಿನ ಯುವಕ ಐದು ತಾಸಿನಲ್ಲಿ ಕಬ್ಬು ಹೇರಿ ಸಾಧನೆಗೆ ಪಾತ್ರನಾಗಿದ್ದಾನೆ. ಈತನನ್ನು ಗ್ರಾಮದವರು ಕೊಂಡಾಡಿದ್ದಾರೆ ಈತನನ್ನು ಎಷ್ಟು ಹೊಗಳಿದ್ರೂ ಕಡಿಮೆ ಎಂದರು. ಈತನಿಗೆ ಗ್ಯಾಂಗಿನ ಮಾಲಕರಾದ ಮಾದೇವ ಕಿಲಾರಿ ಅವರು 5,000 ನಗದು ಬಹುಮಾನ ನೀಡಿ ಸನ್ಮಾನ ಮಾಡಿ ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ಅಪ್ಪು ಇಂಗಳಿ ಸಚಿನ್ ಕಿಲಾರೆ ಕಾರ್ತಿಕ್ ನಾಯಿಕ್ ಎಲ್ಲಪ್ಪ ನಾಯಿಕ್ ಅಪ್ಪು ಕಿಲಾರಿ ವಿಕ್ರಂ ಕಾಂಬಳೆ ಇನ್ನುಳಿದ ಗ್ಯಾಂಗಿನ ಎಲ್ಲಾ ಸದಸ್ಯರು ಸಂಭ್ರಮದ ಆಚರಣೆಯಲ್ಲಿ ಪಾಲ್ಗೊಂಡರು.
ವರದಿ : ರಾಜು ವಾಘಮಾರೆ.




