ನಿಪ್ಪಾಣಿ : ಗ್ರಾಮೀಣ ಪ್ರದೇಶದ ರೈತರಿಗೆ ಆರ್ಥಿಕ ದೃಷ್ಟಿಯಿಂದ ಅನುಕೂಲವಾಗಲೆಂಬ ಉದ್ದೇಶದಿಂದ ದಿವಂಗತ ಅಶೋಕ್ ಪಾಟೀಲ್ ಹಾಗೂ ನೇಮಗೌಡ ಪಾಟೀಲರ ಪ್ರೇರಣೆಯಿಂದ ನಿರ್ಮಿಸಲಾದ ಸಮೀಪದ ಭೋಜ ಗ್ರಾಮದ ಕಲ್ಪವೃಕ್ಷ ಕೋ ಆಪ ಕ್ರೆಡಿಟ್ ಸೊಸೈಟಿಗೆ ಕಳೆದ ಆರ್ಥಿಕ ವರ್ಷದಲ್ಲಿ 1 ಕೋಟಿ 5 ಲಕ್ಷ ರೂಪಾಯಿ ಲಾಭ ಬಂದಿದ್ದು ದಾಖಲೆ 203 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಸಿ ಪ್ರಗತಿಪಥದಲ್ಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂದೀಪ ಪಾಟೀಲ ತಿಳಿಸಿದರು.
ರವಿವಾರ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅತಿ ಶೀಘ್ರದಲ್ಲಿಯೇ ಸಂಸ್ಥೆಯ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದ್ದು ಸಂಸ್ಥೆಯ ಸದಸ್ಯರಿಗೆ ತತ್ಪರಸೇವೆ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಅತ್ಯಾಧುನಿಕ ಯಂತ್ರಗಳೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ.
ಎಂದು ತಿಳಿಸಿ ಸಂಸ್ಥೆಯ ಸಾಂಪತ್ತಿಕ ಸ್ಥಿತಿ ವಿವರಿಸಿದರು ಕಳೆದ ಆರ್ಥಿಕ ವರ್ಷದಲ್ಲಿ ಮಾರ್ಚ್ 2025 ವರೆಗೆ 1677 ಸದಸ್ಯರನ್ನು ಹೊಂದಿದ್ದು 29 ಕೋಟಿ 97 ಲಕ್ಷ ರೂಪಾಯಿ ಸೇರಬಂಡವಾಳ 8 ಕೋಟಿ 40 ಲಕ್ಷ ರೂಪಾಯಿ ನಿಧಿ, 35 ಕೋಟಿ 40 ಲಕ್ಷ ರೂಪಾಯಿ ಠೇವು ಸಂಗ್ರಹಿಸಿದ್ದು 21 ಕೋಟಿ 77 ಲಕ್ಷ ರೂಪಾಯಿಗಳನ್ನು ಇತರೆ ಸಂಸ್ಥೆಗಳಲ್ಲಿ ಗುಂತಾವನೆ ಮಾಡಲಾಗಿದೆ ವರ್ಷಂತಕ್ಕೆ ಸಂಘದ ಸದಸ್ಯರಿಗೆ 19 ಕೋಟಿ 57 ಲಕ್ಷ ರೂಪಾಯಿ ಸಾಲ ನೀಡಿ ಸಕಾಲಕ್ಕೆ ಮರುಪಾವತಿಸಿಕೊಂಡಿದ್ದರಿಂದ ಸಂಸ್ಥೆಗೆ 1 ಕೋಟಿ 5ಲಕ್ಷ ರೂಪಾಯಿ ಲಾಭ ಬಂದಿರೋದಾಗಿ ತಿಳಿಸಿದರು. ಸಂಸ್ಥೆ 34 ವರ್ಷಗಳವರೆಗೆ ಆಡಿಟ್ ಅವರ್ಗ ಪಡೆಯುತ್ತಿದ್ದು ಸದಸ್ಯರಿಗೂ ಅತ್ಯಧಿಕ ಲಾಭಾಂಶ ಹಂಚಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯಕಾರಿ ಅಧಿಕಾರಿ ಸಂಜಯ ಚೌಗುಲೆ ಮಾತನಾಡಿ ಮುಖ್ಯ ಸಂಸ್ಥೆಯೊಂದಿಗೆ ಬೇಡಕಿಹಾಳ ಮತ್ತು ಮಾಂಗುರು ಶಾಖೆಗಳು ಸಹ ಲಾಭದಲ್ಲಿದ್ದು ಗ್ರಾಹಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ಅಲ್ಲದೆ ಸಂಸ್ಥೆಯಿಂದ RTGS ,NEFT,E ಈ ಸ್ಟ್ಯಾಂಪ್ ಸೌಲಭ್ಯಗಳನ್ನು ಹೊಂದಿದೆ. ಸದಸ್ಯರಿಗೆ ಮರಣೋತ್ತರ.
ನಿಧಿ 3000 ಹಾಗೂ ಸಾಲ ಪಡೆದ ರೈತರಿಗೆ ಇತರೆ ಸಂಸ್ಥೆಗಳಿಗಿಂತ ಕಡಿಮೆ 12ರಷ್ಟು ಬಡ್ಡಿದರವಿದೆ. ಎಂದರು. ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ರಮಿತ್ ಸದಲಗೆ ರಮೇಶ್ ಪಾಟೀಲ್ ಅಶೋಕ ಅಪ್ಪಾಸಾಬ ಪಾಟೀಲ,ರವೀಂದ್ರ ರುಗೆ ,ನೇಮಗೌಡ ಪಾಟೀಲ್ ರಾಜಗೌಡ ಪಾಟೀಲ್ ಸೌ.ವಿಜಯಾ ಪಾಟೀಲ ಪದ್ಮಶ್ರೀ ಟಾಕಳೆ ರಾವಸಾಬ ಪಾಟೀಲ, ಶರಾಫತ್ ದೂಧಗಾವೆ ಭಾವುಸಾಬ್ ವಡ್ಡರ ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ