ಕಲಘಟಗಿ : ಕಲಘಟಗಿ ಪಟ್ಟಣದ ಸರಕಾರಿ ಪ್ರಾಥಮಿಕ ಗಂಡುಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಇಂದು ಕರ್ನಾಟಕ ಮಕ್ಕಳ ಹಿತರಕ್ಷಣಾ ಸಮಿತಿ ವತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ನೋಟಬುಕ್ ವಿತರಣೆ ಮಾಡಲಾಯಿತು.
ಕರ್ನಾಟಕ ಮಕ್ಕಳ ಹಿತರಕ್ಷಣಾ ಸಮಿತಿಯ ರಾಜ್ಯಧ್ಯಕ್ಷರಾದ ಉದಯ ಗೌಡರ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಒಂದು ಸಮಿತಿಯು ಸುಮಾರು ಒಂದು ವರ್ಷದಿಂದ ಮಕ್ಕಳ ರಕ್ಷಣೆ ಹಾಗೂ ಸಹಾಯ ಮಾಡುತ್ತ ಬಂದಿದ್ದು ಸುಮಾರು ನಾಲ್ಕು ಸಾವಿರ ಪ್ರೌಢಶಾಲೆಯ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ನೀಡಲಾಗಿದೆ.
ಅದೆ ರೀತಿ ಇಂದು ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟಬುಕ್ ಮತ್ತು ಪೆನ್ನುಗಳನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ಸುಮಾರು ಐದುನೂರು ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟಬುಕ್ ನೀಡುವ ಉದ್ದೇಶ ಹೊಂದಿದ್ದು ಇಗಾಗಲೇ ಈ ಸಮಿತಿಯು ರಾಜ್ಯದ ಏಳು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದು ಮಕ್ಕಳ ರಕ್ಷಣೆ ಹಾಗೂ ಸಹಾಯಕ್ಕೆ ನಾವು ಸಿದ್ದರಿದ್ದೇವೆ ಮಕ್ಕಳು ತಮಗೆ ಏನಾದರೂ ತೊಂದರೆ ಹಾಗೂ ಸಮಸ್ಯೆ ಇದ್ದರೆ ನಮ್ಮ ಸಮಿತಿಯನ್ನು ಸಂಪರ್ಕಿಸಬಹುದು ಎಂದು ರಾಜ್ಯಧ್ಯಕ್ಷರಾದ ಉದಯ ಗೌಡರ ತಿಳಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಹದೇವ ಹರಮಣ್ಣವರ, ರಾಜ್ಯ ಕಾರ್ಯದರ್ಶಿ ವಿಜಯಲಕ್ಷ್ಮಿ ಹರಮಣ್ಣವರ, ಕಲಘಟಗಿ ತಾಲೂಕ ಅಧ್ಯಕ್ಷರಾದ ಕಿರಣ ಗೌಡರ, ಶಾಲಾ ಮುಖ್ಯ ಶಿಕ್ಷಕರಾದ ವೈ ಜಿ ಭಗವತಿ, ಶಿಕ್ಷಕರಾದ ಎಸ್ ಐ ಚಿಕನರ್ತಿ, ಡಿ ಬಿ ಪದ್ಮಣ್ಣವರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುನೀಲ ಕಮ್ಮಾರ ಸಮಿತಿಯ ಸದಸ್ಯರಾದ ಉಮೇಶ ಅಮಾಶಿ, ಮೃತ್ಯುಂಜಯ ಹುಬ್ಬಳ್ಳಿಮಠ, ವಿವೇಕ ಗಾಮನಗಟ್ಟಿ, ವಿಕಾಸ ಅವರಂಗಿ, ಅಭಿಷೇಕ ಗೌಡರ,ನಿಂಗನಗೌಡ ಹುಲಕೊಪ್ಪ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




