ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ 2ನೇ ಹಂತದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಇರುವ ಜೈ ಭಜರಂಗಿ ಆಟೋ ಚಾಲಕರ ಸ್ಟ್ಯಾಂಡ್ ದಲ್ಲಿ ಅರುಣ್ ಸಾಗರ್ ರೋಡ್ ಲೈನ್ಸ್ ಮಾಲೀಕರಾದ ಕುಮಾರ್ ಅವರ ಮತ್ತು ನೇತೃತ್ವದಲ್ಲಿ ಆಟೋ ಚಾಲಕರ ಮುಖಂಡ ಶಿವಣ್ಣ ಸಮ್ಮುಖದಲ್ಲಿ ಅರುಣ್ ಸಾಗರ್ ರೋಡ್ ಲೈನ್ಸ್ ಮಾಲೀಕ ಕುಮಾರ್ ಅವರ ಮುದ್ದು ಮಗು ಗುಣವಂತ ಮಗುವಿನಿಂದ ಕೆಕ್ ಕತ್ತರಿಸು ಮೂಲಕ 2025ನೇ ಪ್ರಾರಂಭೋತ್ಸವ ಆಚರಿಸಲಾಯಿತು.
ಸಾರ್ವಜನಿಕರಿಗೆ ಕುಮಾರ್ ಕೆಕ್ ವಿತರಿಸಿ ನಂತರ ಅವರು ಹೊಸ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವ ದಿನವಾಗಿದು ಈ ಹಿನ್ನೆಲೆಯಲ್ಲಿ ಪ್ರಪಂಚದ ಕೆಲವು ಹೊಸ ವರ್ಷ ಆಚರಿಸುತ್ತಾರೆ ಎಂದು ಅರುಣ್ ಸಾಗರ್ ರೋಡ್ ಲೈನ್ಸ್ ಮಾಲೀಕ ಕುಮಾರ್ ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಟ್ಟರು.
ಈ ಸಂದರ್ಭದಲ್ಲಿಮಂಜು ಶ್ರೀ ಎಂಟರ್ಪ್ರೈಸಸ್ ಮಾಲೀಕ ಎನ್. ಜಿ. ಸಿದ್ದಲಿಂಗಸ್ವಾಮಿ, ಪ್ರಕಾಶ್ ಪಾಂಡೆ, ಜೈ ಭಜರಂಗಿ ಆಟೋ ಚಾಲಕರಾದ ಪ್ರಸನ್, ಧನುವಂತ್, ಉಮೇಶ್,ರಂಗ, ಕುಮಾರ್ ಸೇರಿದಂತೆ ಸಾರ್ವಜನಿಕರು ಸಮಸ್ತ ಆಟೋ ಚಾಲಕರು ಮುಂತಾದವರು ಇದ್ದು ಸಿಹಿ ತಿಂದು ಕುಣಿದು ಕುಪ್ಪಳಿಸಿದರು.
ವರದಿ: ಅಯ್ಯಣ್ಣ ಮಾಸ್ಟರ್