ನಟಿ ಶರ್ಮಿಳಾ ಮಾಂಡ್ರೆ ಭಾರತಕ್ಕಿಂತ ವಿದೇಶಗಳಲ್ಲೇ ಹೆಚ್ಚು ವಾಸ್ತವ್ಯ ಹೂಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಸದಾ ಮಾಡ್ರನ್ ಡ್ರೆಸ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿ ಶೇರ್ ಮಾಡುತ್ತಾರೆ. ಆಗಾಗ್ಗೆ ಸೀರೆಯಲ್ಲಿ ಮಿಂಚುವುದು ಇದೆ. ಈಗ ಹಸಿರು ಬಣ್ಣಸ ಫ್ಲೋರಲ್ ಪ್ರಿಂಟೆಡ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ದರ್ಶನ್ ಜೊತೆ ‘ಡೆವಿಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಗಾಢ ಹಸಿರು ಬಣ್ಣದ ಫ್ಲೋರಲ್ ಪ್ರಿಂಟೆಡ್ ಸೀರೆಯಲ್ಲಿ ಶರ್ಮಿಳಾ ಮಾಂಡ್ರೆ ದರ್ಶನ ಕೊಟ್ಟಿದ್ದಾರೆ. ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಹಂಚಿಕೊಂಡಿದ್ದಾರೆ. ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಮುಖ್ಯವಾದ ಪಾತ್ರದಲ್ಲಿ ಶರ್ಮಿಳಾ ನಟಿಸುತ್ತಿದ್ದಾರೆ. ಸದ್ಯ ತಮ್ಮ ಸೀರೆ ಲುಕ್ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸೀರೆ ಉಟ್ಟು, ಸ್ಲೀವ್‌ಲೆಸ್ ರವಿಕೆ ತೊಟ್ಟು ಕುತ್ತಿಗೆಯಲ್ಲಿ ಒಂದು ನೆಕ್‌ಲೆಸ್ ಧರಿಸಿ ಶರ್ಮಿಳಾ ಪೋಸ್ ಕೊಟ್ಟಿದ್ದಾರೆ. ಕೈಯಲ್ಲಿ ಬಳೆ ಇಲ್ಲ. ಆದರೆ ಕಿವಿಯಲ್ಲಿ ಓಲೆ ನೋಡಬಹುದು. ಇತ್ತೀಚೆಗೆ ನಟಿ ರಮ್ಯಾ ಜೊತೆ ‘ಅಪ್ಪು’ ಸಿನಿಮಾವನ್ನು ಚಿತ್ರಮಂದಿರದಲ್ಲಿ ಶರ್ಮಿಳಾ ವೀಕ್ಷಿಸಿದ್ದರು. ಸದ್ಯ ಹೊಸ ಫೋಟೊಶೂಟ್‌ನಿಂದ ಗಮನ ಸೆಳೆದಿದ್ದಾರೆ. ‘ನವಗ್ರಹ’ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಶರ್ಮಿಳಾ ಮಿಂಚಿದ್ದರು. ಇದೀಗ ಮತ್ತೆ ದರ್ಶನ್ ಜೊತೆ ‘ಡೆವಿಲ್’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.