ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಜೈಲುಗಳಲ್ಲಿ ಅಕ್ರಮ ಮುಂದುವರೆದಿದೆ. ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಸ್ಮಾರ್ಟ್ ಫೋನ್ ಗಳು ಪತ್ತೆಯಾಗಿವೆ. ಜೈಲಿನ ಬ್ಯಾರಕ್ ನಲ್ಲಿ ತಪಾಸಣೆಯು ವೇಳೆಯಲ್ಲಿ ಸ್ಮಾರ್ಟ್ ಫೋನ್ ಗಳು ಪತ್ತೆಯಾಗಿವೆ.
ಹುಬ್ಬಳ್ಳಿ ಉಪ ಕಾರಾಗೃಹದ ಎಂಟನೇ ಬ್ಯಾರೇನಲ್ಲಿ ಮೊಬೈಲ್ ಗಳು, ಚಾರ್ಜರ್ ಗಳು, ಕನೆಕ್ಟರ್ ಗಳು ಪತ್ತೆಯಾಗಿವೆ.ಪತ್ತೆಯಾದ ಮೊಬೈಲ್ ಗಳು ಯಾರದು ಎಂದು ಕೈದಿಗಳು ಒಪ್ಪಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ 13 ವಿಚಾರಣಾಧೀನ ಕೈದಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಭಗವಂತ್, ಕಿರಣ್, ದೀಪಕ್, ಚರಣ್, ಪ್ರಸಾದ್, ವಂಶಿ, ಮಲಿಕ್ ಜಾನ್, ಅಶೋಕ, ಮಹಾಂತೇಶ ಸೇರಿ 13 ಮಂದಿ ವಿರುದ್ಧ ಕಾರಾಗೃಹ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




