ಯಳಂದೂರು: ತಾಲ್ಲೂಕಿನ ಕಿನಕಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ವಿಶ್ವಮಾನವ, ವಿಶ್ವರತ್ನ, ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ134 ನೇ ಜಯಂತಿಯನು ಭಾವಚಿತ್ರಕೆ ಪುಷ್ಪ ಹಾಗೂ ದ್ವೀಪ ಹಾಲಂಕಾರದ ಮೂಲಕ ಹಾಲಂಕರಿಸಿ ಮೆರವಣಿಗೆ ಮಾಡಲಾಯಿತು.
ಬೀದಿಗಳಿಗೆ ಮೆರವಣಿಗೆಯ ಮೂಲಕ ಸಾಗಿ ಜಯಂತಿಯನ್ನಯ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೆರವಣಿಗೆಯಲ್ಲಿ ಎಲ್ಲಾರೂ ನೀಲಿ ಶಾಲು ಧರಿಸಿ
ಅಂಬೇಡ್ಕರ್ ಘೋಷಣೆಯನ್ನು ಕೂಗಿದರು.
ಗ್ರಾಮವು ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತು.
ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸದರು.
ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಸೋಮಶೇಖರ್, ಕೆ ಮಹೇಶ್, ಯೋಗೇಶ್ ಮಾತನಾಡಿ ಜಯಂತಿಯನ್ನು ವರ್ಷ ವರ್ಷಕೆ ಅದ್ದೂರಿಯಾಗಿ ಮಾಡುತಿದ್ದೇವೆ ಗ್ರಾಮದಲ್ಲಿ ಅನ್ನಸಂತರ್ಪಣೆ ಮಾಡಿ ಸಿಹಿ ಹಂಚಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಿನಕಹಳ್ಳಿ ಗ್ರಾಮದ ಯಜಮಾನ್ರಗಳು ಯುವಕರು ಮುಖಂಡರುಗಳು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ