ಕಾಳಗಿ : ತಾಲೂಕಿನ ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ 134ನೇ ಜಯಂತಿ ಆಚರಣೆ ಮಾಡಲಾಯಿತು, ಮೊದಲಿಗೆ ಡಾ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆಗೆ ವಿಧಾನ ಪರಿಷತ್ತು ಸದಸ್ಯರಾದ ಜಗದೇವ ಗುತ್ತೇದಾರ ಮತ್ತು ಸುಭಾಸ ರಾಠೋಡ್ ಹಾಗೂ ಭೀಮರಾವ ಟಿ ಟಿ ಅವರಿಂದ ಮಾಲಾರ್ಪಣೆ ಮಾಡಿ ದೀಪಾ ಬೆಳಗಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು, ಈ ಸಂದರ್ಭದಲ್ಲಿ: ಸುಭಾಸ್ ರಾಠೋಡ್ ಮಾತನಾಡಿದರು, ನಂತರ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು , ಇದೆ ವೇಳೆ ಚಿಂಚೋಳಿ ಮತಕ್ಷೇತ್ರದ ಶಾಸಕರಾದ ಅವಿನಾಶ್ ಜಾಧವ ಅವರು ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ ಕುರಿತು ಮಾತನಾಡಿ ನಂತರ ಬಿಪಿ ಶುಗರ್ ಪರೀಕ್ಷಿಸಿದರು, ನಂತರ ಜಯಂತೋತ್ಸವ ಸಮಿತಿ ಪದಾಧಿಕಾರಿಗಳಿಂದ ರಕ್ತದಾನ ಮಾಡಲಾಯಿತು, ದಲಿತ ಹಿರಿಯ ಮುಖಂಡರು, ತಾಲೂಕು ಎಲ್ಲಾ ಇಲಾಖೆಯ ಅಧಿಕಾರಿಗಳು, ಯುವಕರು ಈ ಸಂದರ್ಭದಲ್ಲಿ ಸ್ಟಾರ್ ಕೇರ್ ಆಸ್ಪತ್ರೆ ಕಲಬುರಗಿ ಅವರಿಂದ ಉಚಿತ ತಪಾಸಣೆ ಮಾಡಲಾಯಿತು,
ವರದಿ : ಹಣಮಂತ ಕುಡಹಳ್ಳಿ




