ಉತ್ತರ ಕನ್ನಡ: ಜಿಲ್ಲೆಯಲ್ಲಿ ಮನೆಯೊಂದರಲ್ಲಿ 500 ರೂಪಾಯಿ ಮುಖಬೆಲೆಯ ಬರೋಬ್ಬರಿ 14 ಕೋಟಿ ನಕಲಿ ನೋಟು ಪತ್ತೆಯಾಗಿದೆ. ಈ ನಕಲಿ ನೋಟುಗಳನ್ನು ಕಂಡಂತ ಪೊಲೀಸರೇ ಶಾಕ್ ಆಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿ ನಗರದ ಅರ್ಷದ್ ಖಾನ್ ಎಂಬುವರ ಮನೆಯಲ್ಲಿ 500 ರೂ ಮೌಲ್ಯದ 14 ಕೋಟಿ ನಕಲಿ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿ ನಗರದ ಅರ್ಷದ್ ಖಾನ್ ಎಂಬುವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ 14 ಕೋಟಿ ಮೌಲ್ಯದ ನಕಲಿ ನೋಟು ಪತ್ತೆಯಾಗಿದ್ದಾವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.