Ad imageAd image

ಜುಲೈ 1 ರಿಂದ 8 ರವರೆಗೆ ಪಂಢರಪುರಕ್ಕೆ 14 ವಿಶೇಷ ರೈಲು ವ್ಯವಸ್ಥೆ

Bharath Vaibhav
ಜುಲೈ 1 ರಿಂದ 8 ರವರೆಗೆ ಪಂಢರಪುರಕ್ಕೆ 14 ವಿಶೇಷ ರೈಲು ವ್ಯವಸ್ಥೆ
WhatsApp Group Join Now
Telegram Group Join Now

ಧಾರವಾಡ: ಪಂಢರಪುರ ಕ್ಷೇತ್ರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಯಲ್ಲಿ ಪಾಲ್ಗೋಳ್ಳುವ ಯಾತ್ರಾರ್ಥಿಗಳಿಗೆ ಅನುಕೂಲಕರ ಪ್ರಯಾಣವನ್ನು ಕಲ್ಪಿಸಲು ಭಾರತೀಯ ರೈಲ್ವೆಯು ಕರ್ನಾಟಕದ ಹುಬ್ಬಳ್ಳಿ ಮತ್ತು ಮಹಾರಾಷ್ಟ್ರದ ಪಂಢರಪುರ ನಡುವೆ 14 ಹೆಚ್ಚುವರಿ ಕಾಯ್ದಿರಿಸದ ವಿಶೇಷ ರೈಲುಗಳನ್ನು ಜುಲೈ 1 ರಿಂದ 8 ರವರೆಗೆ (ಜುಲೈ 4 ರಂದು ಹೊರತುಪಡಿಸಿ) ಹೊರಡಿಸಲಿದೆ ಎಂದು ಕೇಂದ್ರ ರೈಲ್ವೆಯ ಸೊಲ್ಲಾಪೂರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಹಾರಾಷ್ಟ್ರದ ಶ್ರೀಕ್ಷೇತ್ರ ಪಂಢರಪುರದ ಆಷಾಢ ಏಕಾದಶಿ ಜಾತ್ರೆಗೆ ಆಗಮಿಸುವ ಉತ್ತರ ಕರ್ನಾಟಕದ ಭಕ್ತರಿಗೆ ಅನುಕೂಲವಾಗಲು ಮತ್ತು ಸುಗಮ ಪ್ರಯಾಣಕ್ಕೆ ಸಹಾಯಕವಾಗಲು ಕಾಯ್ದಿರಿಸದ 14 ವಿಶೇಷ ರೈಲುಗಳನ್ನು ಸಂಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ-ಪಂಢರಪುರ ಅನ್‍ಸವ್ರ್ಡ್ ಸ್ಪೆಷಲ್(14 ಟ್ರಿಪ್‍ಗಳು): ರೈಲು ಸಂಖ್ಯೆ 07313 ಬುಕ್ ಮಾಡದ ವಿಶೇಷ ರೈಲು ಜುಲೈ 1 ರಿಂದ ಜುಲೈ 8, 2025 ರವರೆಗೆ(ಜುಲೈ 4 ಹೊರತುಪಡಿಸಿ) ಬೆಳಿಗ್ಗೆ 5:10 ಕ್ಕೆ ಹುಬ್ಬಳ್ಳಿಯಿಂದ ಹೊರಟು ಅದೇ ದಿನ ಸಂಜೆ 4 ಕ್ಕೆ ಪಂಢರಪುರ ತಲುಪಲಿದೆ.(7 ಪ್ರವಾಸಗಳು)
ರೈಲು ಸಂಖ್ಯೆ: 07314 ಕಾಯ್ದಿರಿಸದ ವಿಶೇಷ ರೈಲು ಜುಲೈ 1 ರಿಂದ ಜುಲೈ 8, 2025 ರವರೆಗೆ (ಜುಲೈ 4 ಹೊರತುಪಡಿಸಿ) ಸಂಜೆ 6 ಗಂಟೆಗೆ ಪಂಢರಪುರದಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿಯನ್ನು ತಲುಪುತ್ತದೆ.(7 ಪ್ರವಾಸಗಳು)

ನಿಲುಗಡೆಗಳು: ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ ರಸ್ತೆ, ಘಟಪ್ರಭಾ, ಚಿಕ್ಕೋಡಿ ರಸ್ತೆ, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ, ಶೇಡಬಾಳ, ವಿಜಯನಗರ, ಮೀರಜ್, ಅರಗ, ಧಲಗಾಂವ, ಜಾತ್ ರಸ್ತೆ, ವಾಸುದ್ ಮತ್ತು ಸಂಗೋಳ.

ಸಂಯೋಜನೆ: 8 ಸಾಮಾನ್ಯ ದ್ವಿತೀಯ ದರ್ಜೆ, ಸ್ಲೀಪರ್ ವರ್ಗ ಮತ್ತು 2 ಲಗೇಜ್ ಕಮ್ ಗಾರ್ಡ್‍ನ ಬ್ರೇಕ್ ವ್ಯಾನ್‍ಗಳು.(10 ಬೋಗಿಗಳು)
ಟಿಕೆಟಿಂಗ್: ಕಾಯ್ದಿರಿಸದ ಬೋಗಿಗಳ ಟಿಕೆಟ್‍ಗಳನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್‍ಗಳ ಮೂಲಕ ಮತ್ತು ಯುಟಿಎಸ್ ಅಪ್ಲಿಕೇಶನ್ ಮೂಲಕವೂ ಬುಕ್ ಮಾಡಬಹುದು.

ಈ ವಿಶೇಷ ರೈಲುಗಳ ವಿವರವಾದ ಸಮಯ ಮತ್ತು ನಿಲುಗಡೆಗಳಿಗಾಗಿ, ದಯವಿಟ್ಟು www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಡೌನ್‍ಲೋಡ್ ಮಾಡಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!