ಅಮೆರಿಕ : ಭಾರತದಿಂದ ಲೂಟಿ ಮಾಡಿ ಅಮೆರಿಕಗೆ ಹೊತ್ತೊಯ್ದಿದ್ದ 10 ಮಿಲಿಯನ್ ಡಾಲರ್ ಮೌಲ್ಯದ 1400 ಕಲಾಕೃತಿಗಳನ್ನ ಹಿಂದಿರುಗಿಸಲಾಗಿದೆ.
ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಈ ನಿರ್ಧಾರ ಕೈಗೊಂಡಿದ್ದು, ಅಪರೂಪದಲ್ಲಿ ಅಪರೂಪ ಎಂಬಂತಹ ಪ್ರಾಚೀನ ಕಾಲದ ಕಲಾಕೃತಿಗಳು ದೇಶಕ್ಕೆ ಮರಳಿವೆ.
ಭಾರತಕ್ಕೆ ಹಿಂದಿರುಗಿಸಿರುವ ಅಪರೂಪದ ಕಲಾಕೃತಿಗಳ ಪೈಕಿ ಪ್ರತಿಷ್ಠಿತ ನ್ಯೂ ಯಾರ್ಕ್ ಮ್ಯೂಸಿಯಂ ನಲ್ಲಿ ಪ್ರದರ್ಶನ ಗೊಂಡಿದ್ದ ವಸ್ತುಗಳೂ ಸಹ ಇವೆ.
ಸ್ಮಗ್ಲಿಂಗ್ ಮೂಲಕ ಅಕ್ರಮವಾಗಿ ಲಂಡನ್ ಗೆ ಸಾಗಿಸಲಾಗಿದ್ದ ನೃತ್ಯ ಮಾಡುತ್ತಿರುವ ಶೈಲಿಯ ಮರಳು ಕಲಾಕೃತಿಯೂ ಸಹ ವಾಪಸ್ ಬಂದಿದ್ದು, ದೇಶದ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾದ ಕಲಾಕೃತಿಗಳು ತಾಯ್ನಾಡು ಸೇರಿವೆ
ಎಲ್ಲಾ ಕಲಾಕೃತಿಗಳು ಅಮೇರಿಕಾದ ಮ್ಯಾನ್‌ಹ್ಯಾಟನ್ ಜಿಲ್ಲೆಯಲ್ಲಿ ಸ್ಮಗ್ಲರ್‌ಗಳ ವಿರುದ್ಧ ನಡೆದ ಕಾರ್ಯಚರಣೆವೇಳೆ ಸಿಕ್ಕಿದ್ದು, ನಟೋರಿಯಸ್ ಕ್ರಿಮಿನಲ್ ಗಳಾದ ಸುಭಾಷ್ ಕಪೂರ್ ಹಾಗೂ ನ್ಯಾನ್ಸಿ ವೀನರ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲವೂ ಗೊತ್ತಾಗಿದೆ.
ಕಪೂರ್ ಸ್ಮಗ್ಲಿಂಗ್ ಹಿನ್ನೆಲೆಯುಳ್ಳ ಕುಖ್ಯಾತ ಪಾತಕಿಯಾಗಿದ್ದು, ಆತನನ್ನು ಈ ಹಿಂದೆ ಜರ್ಮನಿಯಲ್ಲಿ ಅರೆಸ್ಟ್ ಮಾಡಿ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. 2022ರಲ್ಲಿ ಭಾರತದಲ್ಲಿ ಶಿಕ್ಷೆ ಕೂಡ ಆಗಿತ್ತು.