Ad imageAd image

ಭೀಕರ ಭೂಕಂಪಕ್ಕೆ ಅಕ್ಷರಶಃ ನಲುಗಿದ ಅಫ್ಘಾನಿಸ್ತಾನ:1400 ಜನ ಸಾವು 

Bharath Vaibhav
ಭೀಕರ ಭೂಕಂಪಕ್ಕೆ ಅಕ್ಷರಶಃ ನಲುಗಿದ ಅಫ್ಘಾನಿಸ್ತಾನ:1400 ಜನ ಸಾವು 
WhatsApp Group Join Now
Telegram Group Join Now

ಭೀಕರ ಭೂಕಂಪಕ್ಕೆ ಅಕ್ಷರಶಃ ಅಫ್ಘಾನಿಸ್ತಾನ ನಲುಗಿದ್ದು, ಸಾವನ್ನಪ್ಪಿದವರ ಸಂಖ್ಯೆ 1400 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅವರಲ್ಲಿ ಹೆಚ್ಚಿನವರು ದೂರದ ಕುನಾರ್ ಪ್ರಾಂತ್ಯದಲ್ಲಿದ್ದಾರೆ. ಇದಲ್ಲದೆ, 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭೂಕಂಪದಿಂದ ಬದುಕುಳಿದವರು ರಾತ್ರಿಯನ್ನ ಬಯಲಲ್ಲೇ ಕಳೆದಿದ್ದಾರೆ, ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. ಈ ಕಷ್ಟದ ಸಮಯದಲ್ಲಿ, ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್’ಗೆ ಮಾನವೀಯ ನೆರವು ಕಳುಹಿಸುತ್ತಿದೆ ಮತ್ತು ಬಲಿಪಶುಗಳಿಗೆ ಸಹಾಯ ಮಾಡಲಾಗುತ್ತಿದೆ.

ಪಾಕಿಸ್ತಾನ ಗಡಿಯ ಬಳಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಈ ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.0 ರಷ್ಟಿರಬಹುದು, ಆದರೆ ಇದು ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿ ನಷ್ಟವನ್ನುಂಟುಮಾಡಿದೆ.

ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಅಫ್ಘಾನಿಸ್ತಾನ ತೀವ್ರ ಬರ, ಸಹಾಯದಲ್ಲಿ ಕಡಿತ ಮತ್ತು ಆಹಾರ ಬಿಕ್ಕಟ್ಟಿನಿಂದ ಬಳಲುತ್ತಿರುವಾಗ ಈ ಈ ಪ್ರಬಲ ಭೂಕಂಪದ ವಿಪತ್ತು ಒದಗಿದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಸಿವಿನ ಬಿಕ್ಕಟ್ಟನ್ನ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿ ಎಂದು ವಿಶ್ವ ಆಹಾರ ಕಾರ್ಯಕ್ರಮ ವಿವರಿಸಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!