ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪ್ಪಳ್ಳಿ ಗ್ರಾಮದಲ್ಲಿ ಬಸವೇಶ್ವರ ಕಾನ್ವೆಂಟ್ ಸ್ಕೂಲ್ ಗಾರಂಪ್ಪಳ್ಳಿನಲ್ಲಿ 14ನೇ ವಾರ್ಷಿಕ ಸ್ನೇಹ ಸಮ್ಮೇಳನ ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು,ಶ್ರೀ ಶ್ರೀ ಹವಾ ಮಲ್ಲಿನಾಥ್ ಮಹಾರಾಜರು ಕಾರ್ಯಕ್ರಮದ ದಿವ್ಯ ಸನಿದ್ಯಾ ವಹಿಸಿ ಸಂಸ್ಥೆಯ ಅಧ್ಯಕ್ಷರಾದ ಬಾಬುರಾವ ಬುಳ್ಳಾ ದಂಪತಿಗಳಿಗೆ ಸನ್ಮಾನಿಸಿದರು.S k ಹಸನ ಅಗ್ನಿಶಾಮಾಕ ಠಾಣಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು,ಎಲ್ಲಾ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠವಾದದ್ದು, ಅನ್ನ ನೀಡಿದರೆ ಸಾಕು ಎನ್ನ ಬಹುದು ಆದರೆ ವಿದ್ಯಾ ಸಾಕೆನ್ನಲು ಸಾಧ್ಯವಿಲ್ಲ. ತಾವು ಹಣ ಗಳಿಸುವುದಕಿಂತ ವಿದ್ಯಾಗಳಿಸಿ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಗದೇವಿ ಬಾಬುರಾವ್ ಅವರು ಅಧ್ಯಕ್ಷತೆ ವಹಿಸಿದರು.ಶ್ರೀ ಪವನಕುಮಾರ ಪಾಟೀಲ ಅಧ್ಯಕ್ಷರು ಗಾ.ಪ. ಗಾರಂಪ್ಪಳ್ಳಿ.ಉಪಾಧ್ಯಕ್ಷರು ಶ್ರೀ.ಸೋಮನಾಥ್ ಪಾಟೀಲ,ಶ್ರೀ ವೀರಭದ್ರಪ್ಪ ಮಲ್ಕುಡ್,ಶ್ರೀ ಮಲ್ಲಿಕಾರ್ಜುನ ದಳಪತಿ ಚಿಮ್ಮಾಯಿದಲಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು, ಕಾರ್ಯಕ್ರಮದಲ್ಲಿ ಸುಮಾರು ಮಕ್ಕಳು ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಗೂ ಪಾಲಕರು ಮತ್ತು ಗ್ರಾಮಸ್ಥರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಸುನಿಲ್ ಸಲಗರ




