Ad imageAd image

14ನೇ ಮಗುವಿಗೆ ತಂದೆಯಾದ ವಿಶ್ವದ ಶ್ರೀಮಂತ ವ್ಯಕ್ತಿ

Bharath Vaibhav
14ನೇ ಮಗುವಿಗೆ ತಂದೆಯಾದ ವಿಶ್ವದ ಶ್ರೀಮಂತ ವ್ಯಕ್ತಿ
WhatsApp Group Join Now
Telegram Group Join Now

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ತಮ್ಮ 14ನೇ ಮಗುವಿಗೆ ತಂದೆಯಾಗಿದ್ದಾರೆ. ಈ ಸುದ್ದಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಮಸ್ಕ್ ಅವರ ವೈಯಕ್ತಿಕ ಜೀವನವು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ನ್ಯೂರಾಲಿಂಕ್‌ನ ಕಾರ್ಯನಿರ್ವಾಹಕಿಯಾಗಿರುವ ಮಸ್ಕ್ ಅವರ ಸಂಗಾತಿ ಶಿವೋನ್ ಜಿಲಿಸ್, ಎಕ್ಸ್‌ನಲ್ಲಿ ತಮ್ಮ 3ನೇ ಮಗಳಾದ ಅರ್ಕಾಡಿಯಾಳ ಮೊದಲ ವರ್ಷದ ಜನ್ಮದಿನದ ಬಗ್ಗೆ ಮಾಡಿದ ಪೋಸ್ಟ್‌ನಲ್ಲಿ ತಮ್ಮ 4ನೇ ಮಗ ಸೆಲ್ಡನ್ ಜನನದ ಬಗ್ಗೆಯೂ ತಿಳಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್ ಹೃದಯದ ಇಮೋಜಿ ಹಾಕಿದ್ದಾರೆ.

ಈಗಾಗಲೇ ಮಸ್ಕ್ ಅವರು ಜಿಲಿಸ್ ಅವರಿಂದ 3 ಮಕ್ಕಳನ್ನು ಪಡೆದಿದ್ದರು. ಇತ್ತೀಚೆಗಷ್ಟೇ ತಾವು ಮಸ್ಕ್ ರ ಮಗುವಿಗೆ ತಾಯಿಯಾಗಿರುವುದಾಗಿ ಲೇಖಕಿ ಆಯಪ್ಲೆಕ್ಷೇರ್ ಹೇಳಿದ್ದರು ಹಾಗೂ ಮೆಸ್ಕ್ ಪಿತೃತ್ವಪರೀಕ್ಷೆಗೆ ಒಳಗಾಗಬೇಕು ಎಂದು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಮಸ್ಕ್ ಗೆ ಒಟ್ಟು 4 ಮಹಿಳೆಯರೊಂದಿಗೆ ಸಂಬಂಧವಿದೆ ಎನ್ನಲಾಗಿದ್ದು, ಈವರೆಗೆ ಮೊದಲ ಪತ್ನಿಗೆ 6, 2ನೇ ಗೆಳತಿಗೆ 3, 3ನೇ ಗೆಳತಿಗೆ 3 ಹಾಗೂ 4ನೇ ಗೆಳತಿಗೆ 1 ಸೇರಿ 13 ಮಕ್ಕಳಿದ್ದವು.

WhatsApp Group Join Now
Telegram Group Join Now
Share This Article
error: Content is protected !!