ಜೈಪುರ: ವೈಭವ್ ಸೂರ್ಯವಂಶಿ ನಿನ್ನೆ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹೆಡ್, ಮಿಲ್ಲರ್ ಮತ್ತು ಪಠಾಣ್ ದಾಖಲೆಯನ್ನು ಮುರಿದ್ದಿದ್ದಾರೆ.
ಫಾಸ್ಟೆಸ್ಟ್ ಸೆಂಚೂರಿ ವಿಭಾಗದಲ್ಲಿ ಸೂರ್ಯವಂಶಿ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 14ನೇ ವಯಸ್ಸಿನಲ್ಲಿ ಪಾಸ್ಟೆಸ್ಟ್ ಸೆಂಚೂರಿ ಬಾರಿಸಿದ ಮೊದಲ ಬಾಲಕ ಎಂದ್ರೆ ಅದು ವೈಭವ್ ಸೂರ್ಯವಂಶಿ.. ಇನ್ನು ಫಾಸ್ಟೆಸ್ಟ್ ಸೆಂಚೂರಿ ವಿಭಾಗದಲ್ಲಿ ಮೊದಲನೇ ಸ್ಥಾನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಮೊದಲು ಎರಡನೇ ಸ್ಥಾನದಲ್ಲಿ ಯೂಸೂಫ್ ಪಠಾಣ್, ಮೂರನೇ ಸ್ಥಾನದಲ್ಲಿ ಡೇವಿಡ್ ಮಿಲ್ಲರ್ ಮತ್ತು ನಾಲ್ಕನೇ ಸ್ಥಾನದಲ್ಲಿ ಟ್ರಾವಿಸ್ ಹೆಡ್ ಇದ್ರು. ಈಗ ಪಠಾಣ್, ಹೆಡ್ ಮತ್ತು ಮಿಲ್ಲರ್ ಅವರನ್ನು ಹಿಂದಿಕ್ಕಿರುವ ಸೂರ್ಯವಂಶಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ನಿನ್ನೆ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಮೊದಲಿನಿಂದಲೇ ಗುಜರಾತ್ ಟೈಟಾನ್ಸ್ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ವೈಭವ್ ಕೇವಲ 17 ಎಸೆತಕ್ಕೆ ಅರ್ಧ ಶತಕ ಬಾರಿಸಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಅಂದ್ರೆ ಕೇವಲ 35 ಬಾಲ್ಗಳಿಗೆ 7 ಬೌಂಡರಿ ಮತ್ತು 11 ಸಿಕ್ಸ್ಗಳ ನೆರವಿನಿಂದ 101 ರನ್ ಗಳಿಸಿದರು. ಈ ಶತಕ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಕೇವಲ 14ನೇ ವಯಸ್ಸಿನಲ್ಲಿ ಸೆಂಚೂರಿ ಬಾರಿಸಿದ ಮೊದಲಿಗ ಎಂಬ ಹೆಗ್ಗಳಿಗೆ ಪಾತ್ರರಾದರು.