Ad imageAd image

ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: ನಾಲ್ವರು ಮಕ್ಕಳು ಸೇರಿ 15 ನಾಗರಿಕರು ಸಾವು 43 ಮಂದಿಗೆ ಗಾಯ

Bharath Vaibhav
ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: ನಾಲ್ವರು ಮಕ್ಕಳು ಸೇರಿ 15 ನಾಗರಿಕರು ಸಾವು 43 ಮಂದಿಗೆ ಗಾಯ
WhatsApp Group Join Now
Telegram Group Join Now

ನವದೆಹಲಿ: ಗಡಿ ನಿಯಂತ್ರಣ ರೇಖೆ ಮತ್ತು ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಗಳಲ್ಲಿ ಫಿರಂಗಿ ದಾಳಿ ಹಾಗೂ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಕ್ಕಳು ಮತ್ತು ಒಬ್ಬರು ಯೋಧರು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟು 43 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಭಾರತೀಯ ಸೇನೆಯು ಸಮಾನ ಪ್ರಮಾಣದಲ್ಲಿ ಶೆಲ್ ದಾಳಿಗೆ ಪ್ರತಿಕ್ರಿಯಿಸುತ್ತಿದೆ.

ಪಾಕಿಸ್ತಾನದ ಅನಿಯಂತ್ರಿತ ಶಲ್ ದಾಳಿಯು ಗುರುದ್ವಾರ ಸೇರಿದಂತೆ ಮನೆಗಳು, ವಾಹನಗಳು ಮತ್ತು ವಿವಿಧ ಕಟ್ಟಡಗಳನ್ನು ನಾಶಪಡಿಸಿತು. ಗಡಿ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿತು, ನೂರಾರು ನಿವಾಸಿಗಳು ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆಯಬೇಕಾಯಿತು ಅಥವಾ ಸುರಕ್ಷಿತ ಸ್ಮಳಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ಜಮ್ಮು ಪ್ರದೇಶದ ರಾಜರಿ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ ಮತ್ತು ಕುದ್ವಾರಾ ಸೇರಿದಂತೆ ತೀವ್ರ ಹಾನಿಗೊಳಗಾದ ಜಿಲ್ಲೆ ಪೂಂಚ್ ಗಳಲ್ಲಿ 13 ಮಂದಿ ಮೃತಪಟ್ಟು 42 ಮಂದಿ ಗಾಯಗೊಂಡಿದ್ದಾರೆ.

ಪಾಕ್ ಇಷ್ಟಕ್ಕೆ ಸುಮ್ಮನಾಗದಿದ್ದರೇ… ಮುಂದಿದೆ ಮಾರಿಹಬ್ಬ: Operation Sindoor ನಂತರ ಚೀನಾಕ್ಕೆ NSA ಅಜಿತ್ ದೋವಲ್ ಕಟು ಸಂದೇಶ! ಶೆಲ್ ದಾಳಿಯ ಸಮಯದಲ್ಲಿ ಭಾರತೀಯ ಸೇನಾ ಸೈನಿಕನೊಬ್ಬರು ಹುತಾತ್ಮರಾಗಿದ್ದಾರೆ. ಯೋಧರನ್ನು 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್‌ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಬಾಲಕೋಟ್, ಮಂಧರ್, ಮಂಕೋಟ್, ಕೃಷ್ಣ ಘಾಟಿ, ಗುಲ್ಲು‌, ಕರ್ನಿ ಮತ್ತು ಪೂಂಚ್ ಜಿಲ್ಲಾ ಕೇಂದ್ರಗಳು ಸೇರಿದಂತೆ ಪೂಂಚ್‌ನ ಎಲ್‌ಪಿಸಿ ಉದ್ದಕ್ಕೂ ಶಲ್ ದಾಳಿ ವರದಿಯಾಗಿದ್ದು, ಇದರ ಪರಿಣಾಮವಾಗಿ ಡಜನ್ ಗಟ್ಟಲೆ ಮನೆಗಳು ಮತ್ತು ವಾಹನಗಳು ಹಾನಿಗೊಳಗಾದವು. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಹತ್ತು ಜನರು ಗಾಯಗೊಂಡಿದ್ದಾರೆ ಮತ್ತು ರಾಜರಿ ಜಿಲ್ಲೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಿಯಂತ್ರಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಯಲ್ಲಿ ಮೂವರು ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!