ಬೆಳಗಾವಿ : ವೃದ್ಧ ಉದ್ಯಮಿಗೆ 15 ಕೋಟಿ ಸೈಬರ್ ವಂಚನೆ ಎಸಗಲಾಗಿದೆ. ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡಿ ಸೈಬರ್ ವಂಚಕರು ವಂಚನೆ ಎಸಿಗುತ್ತಿದ್ದಾರೆ.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಇದೀಗ ವೃದ್ಧ ಉದ್ಯಮಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ವೃದ್ಧ ಉದ್ಯಮಿಗೆ ವಿಡಿಯೋ ಕಾಲ್ ಮಾಡಿ ಸೈಬರ್ ವಂಚಕರು ಬೆದರಿಸಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಲಿಸ್ಟ್ ನಲ್ಲಿ ಇದೆ ನೀವು ಮನೆ ಲಾಂಡ್ರಿಂಗ್ ಮಾಡುತ್ತಿದ್ದೀರಿ ಎಂದು ವೃದ್ಧ ಉದ್ಯಮಿಗೆ ಬೆದರಿಕೆ ಹಾಕಿದ್ದಾರೆ.
ಬೇರೆ ಖಾತೆಗೆ ಹಣ ವರ್ಗಾಯಿಸಿ ಎಂದು ಅಕೌಂಟ್ ನಂಬರ್ ಕೊಟ್ಟಿದ್ದಾರೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ನಿಮಗೆ ವಾಪಸ್ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಈ ವೇಳೆ ಹಂತ ಹಂತವಾಗಿ 15 ಕೋಟಿ ಹಣ ಸೈಬರ್ ವಂಚಕರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ.
ಬಳಿಕ ಸಂಪರ್ಕಕ್ಕೆ ಸಿಗದೇ ಇದ್ದಾಗ ಅನುಮಾನಗೊಂಡು ವೃದ್ಧ ಉದ್ಯಮಿ ಬೆಳಗಾವಿ ನಗರದ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್ 18ರಂದು ಈ ಒಂದು ಘಟನೆ ನಡೆದಿದ್ದು, ದೂರು ಆಧರಿಸಿ ಪೊಲೀಸರು ಸೈಬರ್ ವಂಚಕರ ಅಕೌಂಟ್ ಫ್ರೀಜ್ ಮಾಡಿದ್ದಾರೆ. 15 ಕೋಟಿ ಪೈಕಿ ಇರುವ 90 ಲಕ್ಷ ಇದ್ದ ಖಾತೆ ಫ್ರೀಜ್ ಮಾಡಿದ್ದಾರೆ.
ಸೈಬರ್ ವಂಚಕರ ಬಂಧನಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ವಿಶೇಷ ತಂಡ ರಚನೆ ಮಾಡಿದ್ದಾರೆ ಒಂದೇ ತಿಂಗಳಲ್ಲಿ ಮೂವರು ಹಿರಿಯ ನಾಗರಿಕರಿಗೆ ಸೈಬರ್ ವಂಚನೆ ನಡೆದಿದೆ. ಈ ರೀತಿಯ ಬೆದರಿಕೆಗೆ ಹೆದರದೆ ದೂರು ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.




