ಸೇಡಂ: ಮಾನ್ಯ ಮುಖ್ಯಮಂತ್ರಿಗಳು ಜನ ಸಾಮಾನ್ಯರಿಗೆ ಒಂದು ಕೈಯಿಂದ ನೀಡಿ ಮತ್ತೊಂದು ಕೈಯಿಂದ ಕಸುಕೋದು ಇದು ಸರಿಯಲ್ಲ ಇಷ್ಟು ದಿನ ಬಸ್ ಫ್ರೀ ಮಾಡಿ ಇವಾಗ ಕೂಡಲೇ ಅದರ ದರ ಶೇ15% ಹೆಚ್ಚಿಸಿದರೆ ಜನ ಸಾಮಾನ್ಯರು ಪ್ರಯಾಣ ಮಾಡುವದು ಹೇಗೆ? ಇದಕ್ಕೆ ಬಹುಜನ ಸಮಾಜ ಪಕ್ಷ ವಿರುದ್ಧ ವ್ಯಕ್ತಪಡಿಸುತ್ತದೆ ಕೂಡಲೇ ನೀವು ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆಯಬೇಕು ಒಂದುವೇಳೆ ಹಿಂಪಡೆಯಡಿದ್ದಾರೆ ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಕ್ಷ ಸೇಡಂ ವತಿಯಿಂದ ಪ್ರತಿಭಟನೆ ನಡಿಸಲಾಗುತ್ತದೆ.
ಆದ್ದರಿಂದ ನನ್ನ ಎಲ್ಲಾ ಪ್ರಜ್ಞಾವಂತ ಮತದಾರರೇ ಇಂಥ ಉಚಿತ ಗ್ಯಾರಂಟಿ ಗಳಿಗೆ ಬಲಿಯಾಗಬೇಡಿ ಮುಂದಿನ ದಿನದಲ್ಲಿ ಇಂಥ ಸರ್ಕಾರಕ್ಕೆ ಪಾಠ ಕಲಿಸಲು ಸಿದ್ಧರಾಗಿ ಎಂದು ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರಾದ ರೇವಣ ಸಿದ್ಧ ಎಸ್ ಶಿಂದೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್