ಪಾವಗಡ: ತಾಲೂಕಿನ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಫೆಬ್ರವರಿ ತಿಂಗಳ 5 ಕೆ ಜಿ ಮತ್ತು ಮಾರ್ಚ್ ತಿಂಗಳ 10 ಕೆ ಜಿ ಸೇರಿ ಕುಟುಂಬದ ಪ್ರತಿ ಸದಸ್ಯರಿಗೆ ಒಟ್ಟು 15 ಕೆ.ಜಿ ಅಕ್ಕಿ ವಿತರಿಸಲಾಗುವುದು ಎಂದು ಪಾವಗಡ ತಹಸಿಲ್ದಾರ್ ಡಿ ಎನ್ ವರದರಾಜು ಅವರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಇರುವ ತಹಸಿಲ್ದಾರ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಸರ್ಕಾರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಿಸಲಾಗಿತ್ತು ಇಲ್ಲಿಯವರೆಗೂ 5 ಕೆಜಿ ಅಕ್ಕಿ, ಉಳಿದ ಐದು ಕೆಜಿಗೆ ಅಕ್ಕಿ ಬದಲಿಗೆ 170 ರೂಪಾಯಿ ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತಿತ್ತು, ಆದರೆ ಫೆಬ್ರವರಿ ತಿಂಗಳ ಪಡಿತರ ಈಗಾಗಲೇ ವಿತರಿಸಲಾಗಿದ್ದು ಆದೇಶದನ್ವಯ ಫೆಬ್ರವರಿ ತಿಂಗಳ 5 ಕೆಜಿ ಮತ್ತು ಮಾರ್ಚ್ ತಿಂಗಳ 10 ಕೆಜಿ ಅಕ್ಕಿಯನ್ನು ಸೇರಿಸಿ 15 ಕೆಜಿ ಅಕ್ಕಿ ವಿತರಿಸಲಾಗುವುದು ಗ್ರಾಹಕರು ತಮ್ಮ ಅನ್ಯಾಯ ಬೆಲೆ ಅಂಗಡಿ ಬಳಿ ತೆರಳಿ ಅಕ್ಕಿಯನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ:ಶಿವಾನಂದ




