ಸುಲೇಪೇಟ: ಕರ್ನಾಟಕ ರಾಜ್ಯ ಪೊಲೀಸ್ ಚಿಂಚೋಳಿ ಉಪ ವಿಭಾಗ ಸುಲೇಪೇಟ ವೃತ್ತ ಸುಲೇಪೇಟ ಪೊಲೀಸ್ ಠಾಣೆ ವತಿಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಆಚರಣೆಯನ್ನು ಶ್ರೀ ಗುರು ನಂಜುಂಡೇಶ್ವರ ಶಾಲೆ ವಿದ್ಯಾರ್ಥಿಗಳ ಹಾಗೂ ನಿರ್ಮಲ ಜ್ಞಾನ ಶಾಲೆ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಏಕತಾ ದಿನಾಚರಣೆ ಮಾಡಲಾಯಿತು.
ಬಸವೇಶ್ವರ ವೃತ್ತದಿಂದ ಪೊಲೀಸ್ ಠಾಣೆವರೆಗೆ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಶಿಕ್ಷಕರು ಪದ ಸಂಚಲನ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮೂಲಕ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಈ ಒಂದು ಕಾರ್ಯಕ್ರಮದ ಕುರಿತು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಅಮರ ಕುಲಕರ್ಣಿ ಮಾತನಾಡಿ ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕರಾದ ರಾಘವೇಂದ್ರ ಪೊಲೀಸ್ ಸಿಬ್ಬಂದಿಗಳಾದ.ನಟರಾಜ್.ಸದ್ದಂ ಪಟೇಲ್.ವೆಂಕಟೇಶ್.ಜಿತೇಂದ್ರ.ಬಸವರಾಜ್. ಮೋಹನ್ ರೆಡ್ಡಿ.ಗೃಹರಕ್ಷಕದಳ ಸಿಬ್ಬಂದಿಗಳಾದ ಅಶ್ರಫ್ ಪಟೇಲ್ .ಪ್ರಭಾಕರ್. ಮಲ್ಲಪ್ಪ. ಗ್ರಾಮದ ಪ್ರಮುಖ ಮುಖಂಡರಾದ ಸಂತೋಷ್ ರಾಥೋಡ್.ಸುನಿಲ್ ಕೋರಿ.ರುದ್ರಮುನಿ ರಾಮತೀರ್.ರಾಜು ಡಬ್ಬಾ.ಶಾಲೆ ಶಿಕ್ಷಕರಾದ ಸೋಮನಾಥ್ ರೆಡ್ಡಿ.ಅಂಬರೀಶ್.ವಿಜಯಕುಮಾರ್ ಎಚ್ ಕೆ ಸರ್. ಅಣವೀರ್ ಮುಂತಾದ ಶಿಕ್ಷಕರು ಉಪಸ್ಥಿದ್ದರು.
ವರದಿ: ಸುನಿಲ್ ಸಲಗರ




