ಬೆಂಗಳೂರು: ಮನುಷ್ಯನಾಗಿ ಹುಟ್ಟಿದ ಮೇಲೆ ದೇಶದ ಮತ್ತು ನಾಡಿನ ಏಳಿಗೆಗಾಗಿ ಸಂಪತ್ತನ್ನು ದೋಚುವ ಭ್ರಷ್ಟಾಚಾರಿಗಳ ವಿರುದ್ಧ ಹೋರಾಡಿ ಸಂಪತ್ತನ್ನು ಉಳಿಸಲು ಭ್ರಷ್ಟಾಚಾರವನ್ನು ತಡೆಗಟ್ಟುವ ಸಲುವಾಗಿ ರಾಜ್ಯದಾದ್ಯಂತ ನೂತನ ಜಿಲ್ಲಾ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ ಪ್ರತಿಯೊಬ್ಬ ಆರ್‌ಟಿಐ ಕಾರ್ಯಕರ್ತರು ಭಾಗವಹಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಗೌರವಾಧ್ಯಕ್ಷ ಸಿದ್ದು ಹೇಳಿದರು.
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯಿಂದ ದಿನಾಂಕ 15 ಡಿಸೆಂಬರ್ 2024ರಂದು ನಗರದ ಕುಮಾರ್ ಪಾರ್ಕ್ ಹತ್ತಿರ ಇರುವ ಗಾಂಧಿ ಭವನ ಬಾಪೂಜಿ ಸಭಾಂಗಣದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು ಶ್ರೇಷ್ಠ ಸಮಾಜ ಸುಧಾರಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪೀಣ್ಯ 2ನೇ ಹಂತದಲ್ಲಿರುವ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಗೌರವಾಧ್ಯಕ್ಷ ಸಿದ್ದು, ಅಧ್ಯಕ್ಷ ಗುರುರಾಜ್ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಪ್ರಾರಂಭಿಸಿ 1ವರ್ಷ ಪೂರೈಸುತ್ತಿರುವ ಮೂಲಕ ಪ್ರಥಮ ವಾರ್ಷಿಕೋತ್ಸವ ಸಮಾರಂಭಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಸಮಾಜ ಸುಧಾರಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಗುತ್ತದೆ.
ಸಬ್ಜಲಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ರಾಯಚೂರು ಇವರಿಂದ ಪ್ರಾಸ್ತಾವಿಕವಾಗಿ ನುಡಿ.
ಜಿಲ್ಲಾಧ್ಯಕ್ಷ ಗುರುರಾಜು,ಐ.ಎಚ್ ಉಪಾಧ್ಯಕ್ಷ ಲೋಕೇಶ್,ಸದಸ್ಯರಾದ ದೀಪಕ್,
ಪವನ್, ಸಿದ್ದು ಅವರು ಪತ್ರಿಕಾಗೋಷ್ಠಿ ಭಾಗವಹಿಸಿದ್ದರೆಂದು ತಿಳಿಸಿದರು
ವರದಿ: ಅಯ್ಯಣ್ಣ ಮಾಸ್ಟರ್