ಅಥಣಿ : ಅಥಣಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ 15 ನೆಯ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ ಮಾಡಲಾಯಿತು”ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ” ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಮತದಾರರ ಪ್ರತಿಜ್ಞಾವಿಧಿ ಬೋಧನೆಯನ್ನು ತಾಲೂಕು ಪಂಚಾಯಿತಿ ಅಥಣಿ ಕಾರ್ಯಾಲಯದ ಆವರಣದ ಮುಂದೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಎಸ್ ಮಠದ ಸಹಾಯಕ ನಿರ್ದೇಶಕರು (ಪಂರಾ) ಅಥಣಿ ವ್ಯವಸ್ಥಾಪಕರು ಜಿ.ಎಂ ಸ್ವಾಮಿ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಾಯಿದ್ ಪಟೇಲ್ ಇವರು ಎಲ್ಲರಿಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ನಾಮದಾರ್ ಸಂಜು ಕಾಂಬಳೆ, ಜೈಸಿಂಗ್ ಪವರ್, ಎಸ್ ಎನ್ ಹಿರೇಮಠ, ಟಿ ಎನ್ ಕೋಳಿ, ಸ್ವಪ್ನ ಜಂಬಗಿ, ಶೈಲೂ ಶ್ರೀ ಭರಬರೇ ಮೀನಾಕ್ಷಿ ಬನಹಟ್ಟಿ ಸತೀಶ ಬಸಗೌಡರ, ವೆಂಕಟೇಶ್ ಸಂದ್ರಿಮನಿ ಶಿವಾನಂದ ಸಾವಗಾವಿ, ಸಮುದ್ರ ವಾಲಿ, ಮುರುಗೇಶ್ ಐನಾಪುರ್, ಸಲ್ಮಾನ್ ಕಾಗಜಿ, ಬಸ್ಸು, ಜ್ಯೋತಿ ಮಿರಜಕರ್, ಮತ್ತು ತಾಲೂಕು ಪಂಚಾಯಿತಿ ಹಾಗೂ ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ವರದಿ: ರಾಜು ವಾಘಮಾರೆ.




