ತುಮಕೂರು : ರಾಜ್ಯದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಪಾಪಿ ತಂದೆಯೋರ್ವನೇ ತನ್ನ 16 ವರ್ಷದ ಪುತ್ರಿಯ ಪಾಲಿಗೆ ರಾಕ್ಷಸನಾಗಿದ್ದಾರೆ. ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಅಮೃತೂರು ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ಬೆಳಕಿಗೆ, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಕೀಚಕ ತಂದೆಯು ತನ್ನ ಪತ್ನಿ ಹಾಗೂ ಚಿಕ್ಕ ಮಗಳು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು.
ಆಗ ಮನೆಯಲ್ಲಿ ಒಂಟಿಯಾಗಿದ್ದ ತನ್ನ ಮಗಳ ಮೇಲೆಯೇ ಈ ಪಾಪ ಕೃತ್ಯ ಎಸಗಿದ್ದಾನೆ. ಊರಿಂದ ಬಂದ ಸಂತ್ರಸ್ತ ಬಾಲಕಿ ತಾಯಿಯು ಘಟನೆಯ ಬಗ್ಗೆ ಅರಿತಿದ್ದಾಳೆ. ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆ ಮಾಡಿಸಿದ್ದು, ಆಗ ಪ್ರಕರಣಕ್ಕೆ ಮತ್ತಷ್ಟೂ ಪುಷ್ಠಿ ಸಿಕ್ಕಿದೆ.