ಯಮಕನಮರಡಿ:ದಿನಾಂಕ 10-05-2025 ರಂದು ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಅರವೀಂದ ಕಾರ್ಚಿ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಜಿಲ್ಲಾ ಪಂ ವ್ಯಾಪ್ತಿಯಲ್ಲಿ ಬರುವ ಪಣಗುತ್ತಿ ಗ್ರಾಮದ ವಿದ್ಯಾರ್ಥಿಯಾದ ಸ್ನೇಹ ಸಿದ್ದಪ್ಪಾ ಪೂಜೇರಿ ಅವರು 2024-2025 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 623 ಅಂಕವನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಕೊಂಡ ಹಿನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಸತ್ಕರಿಸಿ ಅಭಿನಂದನೆ ಕೊರುವ ಮೂಲಕ ನಿಮ್ಮ ಮುಂದಿನ ವಿದ್ಯಾಭ್ಯಾಸದ ಬದಕು ಇನಷ್ಟು ಉಜ್ಜವಲವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು.ಸದಸ್ಯರು ಹಾಗೂ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.