ಕಾಳಗಿ : ಹೋಡೆ ಬೀರನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೊರವಿ ಗಾಂಧಿನಗರ ನಲ್ಲಿ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ, ಜೆ ಜೆ ಎಮ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಹಾಯಿಸಿದ್ದು, ಆದರೆ ಸುಮಾರು 30ದಿನಗಳಿಂದ ಮೋಟಾರ್ ಸುಟ್ಟು ಹೋಗಿದ್ದು, ರಿಪೇರಿ ಮಾಡಿ ಕೋಡಿ ಎಂದು ಸಾರ್ವಜನಿಕರು ಸುಮಾರು ಬಾರಿ ಗ್ರಾಮ ಪಂಚಾಯತ್ ಸದ್ಯಸರಿಗೂ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೂ ಹೇಳಿದರು.
ಮತ್ತೆ ಲಿಖಿತ ಮೂಲಕ ಅನೇಕ ಬಾರಿ ಮನವಿ ಪತ್ರ ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ, ಮನೆ ಬಳಕೆಗೆ ಮತ್ತು ಧನ ಕರು, ಕುರಿಗಳಿಗೆ ಸುಮಾರು ಒಂದು ಮೈಲಿ ದೂರ ಹೋಗಿ ಕೊಳವೆ ಬಾವಿಯಿಂದ ನೀರು ತರುತ್ತಿದ್ದಾರೆ, ಆದರೆ, ವಯಸ್ಸಾದ ಮಹಿಳೆಯರು ಅಂತೂ ಸೊಂಟ ನೋವು,ಮಂಡಿ ನೋವು ಆಗ್ತಿದೆ, ನಮಗೆ ಗ್ರಾಮ ಪಂಚಾಯತ್ ಯಿಂದ ಕುಡಿಯಲು ನೀರು ಮಾತ್ರ ಕೋಡಿ ಬೇರೇನು ಬೇಕಾಗಿಲ್ಲ ಎಂದು ತಮ್ಮ ಅಳಲನ್ನು ನಮ್ಮ ವಾಹಿನಿಯೊಂದಿಗೆ ತೋಡಿಕೊಂಡರು, ನಮ್ಮ ಈ ಬೇಡಿಕೆ ಆದಷ್ಟು ಬೇಗಾ ಈಡೇರಿಸದಿದ್ದಲಿ ರಸ್ತೆ ತಡೆದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಹಣಮಂತ ಶೀಲವಂತ ಹಾಗೂ ಅನೇಕ ಮಹಿಳೆಯರು ಅಭಿವೃದ್ಧಿ ಅಧಿಕಾರಿಗಳಿಗೆ ಸುದ್ದಿ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದರು, ಇದೆ ವೇಳೆ ಎಲ್ಲಾ ಸಾರ್ವಜನಿಕರು ಇದ್ದರು
ವರದಿ : ಹಣಮಂತ ಕುಡಹಳ್ಳಿ




