ಬಾಗಲಕೋಟೆ : ಹೃದಯಾಘಾತದ ಸರಣಿ ಸಾವು ಮುಂದುವರೆದಿದ್ದು, ಮಲಗಿದ್ದಲ್ಲೇ ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದ್ ಗುಡ್ಡ ತಾಲೂಕಿನ ಮುರಡಿ ಗ್ರಾಮದ ಮನೆಯಲ್ಲಿ ರೈತ ಅಂದಾನಪ್ಪ (43) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾತ್ರಿ ಎದೆನೋವು ಎಂದು ಹೇಳಿ ರೈತ ಅಂದಾನಪ್ಪ, ಪಿತ್ತ ಇರಬೇಕೆಂದು ಮಲಗಿದ್ದ ಅಂದಾನಪ್ಪ ಸೂಡಿ ಬೆಳಗ್ಗೆ 7 ಗಂಟೆಯಾದ್ರೂ ಮೇಲೇಳದಿದ್ದಾಗ ಎಬ್ಬಿಸಲು ಹೋದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.




