ಗೋಕಾಕ: ಮಾದಕ ವಸ್ತುಗಳ ಸೇವನೆ ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ. ಮದ್ಯ ಸೇವನೆ ತ್ಯಜಿಸಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಮದ್ಯವರ್ಜನ ಶಿಬಿರದ ಅಧ್ಯಕ್ಷತೆ ವಹಿಸಿದ ಬಾಳೇಶ ಸವತಿಕಾಯಿ ತಿಳಿಸಿದರು.
ಪಟ್ಟಣದ ಜ್ಞಾನ ಮಂದಿರ ಆಧ್ಯಾತ್ಮಿಕ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಆಯೋಜಿಸಿದ್ದ 1882 ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು. ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ, ಸುಖ ಕರ ಸಂಸಾರಕ್ಕೆ ಮದ್ಯಸೇವನೆ ಶತ್ರು ಇದ್ದಂತೆ. ಮಾದಕ ವಸ್ತುಗಳನ್ನು ತ್ಯಜಿಸಿ ಉತ್ತಮ ಜೀವನ ನಡೆಸುವುದರಿಂದ ಸಮಾಜದಲ್ಲಿ ಗೌರವ ದೊರೆಯುತ್ತದೆ. ಮದ್ಯಸೇವನೆ ಚಿಕ್ಕ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಚಿಕ್ಕವಯಸ್ಸಿನಲ್ಲೆ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಮದ್ಯಸೇವನೆ ತ್ಯಜಿಸಿ ಸುಖಕರ ಜೀವನ ವನ್ನು ನಡೆಸಬೇಕು ಎಂದು ತಿಳಿಸಿದರು.
ಸೋಮಲಿಂಗಪ್ಪ ಪಜ್ಜನ್ನವರ ಮಾತನಾಡಿ, ವ್ಯಸನಕ್ಕೆ ಬಲಿಯಾದರೆ ಕುಟುಂಬ ಬೀದಿಪಾಲಾಗುತ್ತದೆ. ಮೆನಯಲ್ಲಿರುವ ಮಕ್ಕಳು ವ್ಯಸನಕ್ಕೆ ಬಲಿಯಾಗಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತದೆ. ಯುವಜನತೆ ನಮ್ಮ ದೇಶದ ಶಕ್ತಿ ಯುವಕರು ವ್ಯಸನಕ್ಕೆ ಬಲಿಯಾಗದಿರಿ ಎಂದು ತಿಳಿಸಿದರು.
ಮಹಾಂತೇಶ ಗೋಕಾಕ ಮಾತನಾಡಿ, ಮದ್ಯ ಸೇವನೆ ಮನುಷ್ಯನ ಜೀವನ ಹಾಳು ಮಾಡುತ್ತದೆ. ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜೀವನವನ್ನು ನರಕವನ್ನಾಗಿಸುತ್ತದೆ. ಮಾದಕ ವಸ್ತುಗಳಿಂದ ದೂರವಿದ್ದು ಸುಖಕರ ಸಂಸಾರವನ್ನು ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಸ್ಥಾನ ವಹಿಸಿದ್ದ ಬಾಳೇಶ ಸವತಿಕಾಯಿ, ಸೋಮಲಿಂಗಪ್ಪ ಪಜ್ಜನ್ನವರ, ಮಾಹಾಂತೇಶ ಗೋಕಾಕ ಮೊದಲಾದವರು ಉಪಸ್ಥಿತರಿದ್ದರು.