ಬೆಳಗಾವಿ : ಇಲ್ಲಿನ ಸವದತ್ತಿ ತಾಲೂಕಿನ ಶಕ್ತಿಪೀಠ ಏಳುಕೊಳ್ಳದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಜನವರಿ 19 ರಿಂದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು1.99 ಕೋಟಿ ಮೌಲ್ಯದ ಹಣ ಮತ್ತು ಕಾಣಿಕೆ ಸಂಗ್ರಹವಾಗಿದ್ದು ದಾಖಲೆ ಬರೆದಿದೆ.
ಶ್ರೀರೇಣುಕಾ ಯಲ್ಲಮ್ಮನಿಗೆ ಭಕ್ತರು ಹುಂಡಿಗೆ ಸಲ್ಲಿಸಿದ್ದ ಕಾಣಿಕೆಯನ್ನು ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ತಹಶೀಲ್ದಾರ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಂದ ಏಣಿಕೆ ಆರಂಭಿಸಲಾಗಿದೆ.
ಮೊದಲ ದಿನ 8.65 ಲಕ್ಷ ಮೌಲ್ಯದ ಚಿನ್ನಾಭರಣ, 5.05 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ 56.82 ಲಕ್ಷ ಎಣಿಕೆ ಮಾಡಲಾಗಿತ್ತು.
ಜ.21 ರಂದು 3.15 ಲಕ್ಷ ಚಿನ್ನ,1.67 ಲಕ್ಷ ಬೆಳ್ಳಿ ಹಾಗೂ 72.99 ಲಕ್ಷ ನಗದು ಮತ್ತು ಇಂದು (ಜ. 22) 3.33 ಲಕ್ಷ ಮೌಲ್ಯದ ಚಿನ್ನ, ರೂ. 4.77 ಲಕ್ಷ ಮೌಲ್ಯದ ಬೆಳ್ಳಿ ಹಾಗೂ 42.83 ಲಕ್ಷ ಮೌಲ್ಯದ ನಗದು ಎಣಿಕೆ ಮಾಡಲಾಗಿದೆ.
ಹೀಗಾಗಿ ಒಟ್ಟಾರೆಯಾಗಿ 1.99 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇನ್ನು ಎಣಿಕೆ ವೇಳೆ ಅಮಾನ್ಯಗೊಂಡ ನೋಟುಗಳು, ಅಮೇರಿಕಾ, ಯುರೋಪ್, ಓಮನ್, ಕೆನಡಾದ ವಿದೇಶಿ ಕರೆನ್ಸಿಗಳು ಕೂಡ ದೊರೆತಿವೆ.




