ಕೋಲ್ಕತ್ತಾ: ನಾಯಕ ಶುಭಮಾನ್ ಗಿಲ್ ಬಿರುಸಿನ 90 (55 ಎಸೆತ, 10 ಬೌಂಡರಿ 3 ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಇಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಗೆ 198 ರನ್ ಗಳಿಸಿ ಎದುರಾಳಿ ತಂಡಕ್ಕೆ 199 ರನ್ ಗಳ ಗೆಲುವಿನ ಗುರಿ ನೀಡಿತು.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭ ಆಟಗಾರರಾದ ಸಾಯಿ ಸುದರ್ಶನ್ ಹಾಗೂ ಶುಭಮಾನ್ ಗಿಲ್ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಈ ಇಬ್ಬರು ಮೊದಲು ವಿಕೆಟ್ ಗೆ 12.2 ಓವರುಗಳಲ್ಲಿ 114 ರನ್ ಸೇರಿಸಿದರು. ಸಾಯಿ ಸುದರ್ಶನ್ ಕೂಡ ಅರ್ಧ ಶತಕ ಸಿಡಿಸಿದರು. ಅವರು 36 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ನಂತರ ಅನುಭವಿ ಆಟಗಾರ ಜೋಶ್ ಬಟ್ಲರ್ ಕೂಡ ಉಪಯುಕ್ತ 41 ರನ್ ಗಳಿಸಿದರು. ಅವರು 23 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ ಈ ರನ್ ತಂದರು.