ಬೆಂಗಳೂರು: ಬಾಗಿನವು ಹಿಂದೂ ಸಂಪ್ರದಾಯದಲ್ಲಿ ಸಮೃದ್ಧಿ, ಆರೋಗ್ಯ ಮತ್ತು ನೆಮ್ಮದಿಯನ್ನು ಹಾರೈಸಲು ನೀಡುವ ಒಂದು ಉಡುಗೊರೆಯಾಗಿದೆ. ಇದು ಸಾಮಾನ್ಯವಾಗಿ ‘ಗೌರಿ- ಗಣೇಶ’ ಹಬ್ಬ ಅಥವಾ ವರಮಹಾಲಕ್ಷ್ಮಿ ಹಬ್ಬದಂದು ಸುಮಂಗಲಿಯರಿಗೆ(ಮುತ್ತೈದೆಯರಿಗೆ) ಬಾಗಿನ ಅರ್ಪಿಸುವ ಪದ್ಧತಿ ಪರಂಪರೆಯಾಗಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಭಾಸ್ಕರ್ ಆಚಾರಿ ಹೇಳಿದರು.
ಅವರು ಶ್ರೀನಿವಾಸ್ ಮಂಜುನಾಥ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಬೆಂಗಳೂರು ಗ್ರೇಟರ್ ಬಿಬಿಎಂಪಿ ಪ್ರಭಲ ಆಕಾಂಕ್ಷಿ ಅಭ್ಯರ್ಥಿ ಡಾ.ಮಂಜುನಾಥ್ (ಎಬಿಬಿ ಮಂಜಣ್ಣ) ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ ಮಂಜಣ್ಣ ಇವರ ನೇತೃತ್ವದಲ್ಲಿ “ಗೌರಿ ಗಣೇಶ” ಹಬ್ಬದ ಪ್ರಯುಕ್ತ ಸುಮಂಗಲಿಯರಿಗೆ ಬಾಗಿನ ನೀಡುವ ಅದ್ಬುತ ಕಾರ್ಯ ಕ್ರಮವನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡಿನ ಮಂಜುನಾಥ್ ನಗರದ ಎಬಿಬಿ ಮಂಜುನಾಥ್ ಅವರ ಸ್ವಗ್ರಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಾಗಿನ ವಿತರಿಸಿ ಭಾಸ್ಕರ್ ಆಚಾರಿ ಮಾತನಾಡಿದರು.

ಅವರು ಶ್ರೀನಿವಾಸ್ ಮಂಜುನಾಥ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಮಂಜುನಾಥ್ ಎಬಿಬಿ ಅವರು ಸರ್ವರಿಗೂ ಸ್ವಾಗತಿಸಿ ಮಾತನಾಡಿದ ಅವರು ಹಿಂದೂ ಧರ್ಮದ ಮಹಿಳೆಯರ ಮದುವೆ ನಂತರದ ಜೀವನದಲ್ಲಿ ಗೌರಿ ಹಬ್ಬದ ಸಂದರ್ಭದಲ್ಲಿ ಬಾಗಿನ ಕೊಡುವುದು ಒಂದು ಭಾರತೀಯ ಸನಾತನ ಹಿಂದೂ ಧರ್ಮದ ಸಂಕೇತವಾಗಿದೆ ನನ್ನ ದುಡಿಮೆಯಲ್ಲಿ ಸಮಾಜದಕ್ಕೆ ನನ್ನ ಕೈಲಾದಷ್ಟು ಸಹಾಯ ಸಹಕಾರ ಮಾಡಿಕೊಂಡು ಬರುತ್ತಿದ್ದೇನೆ ತಮ್ಮೇಲ್ಲರ ಆಶಿರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಆಶಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಕೇಶವ ದಾಸ್, ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ, ಮಹಿಳೆಯರಾದ ರೂಪಾ ಶ್ರೀ, ಗಿರೀಜಾ ಸೇರಿದಂತೆ ಮುಂತಾದವರು ಇದ್ದರು.
ವರದಿ :ಅಯ್ಯಣ್ಣ ಮಾಸ್ಟರ್




