Ad imageAd image

ಅಗಸ್ತ್ಯ ವಾಹಿನಿಯ ೧ನೇಯ ವಾರ್ಷಿಕೋತ್ಸವ

Bharath Vaibhav
ಅಗಸ್ತ್ಯ ವಾಹಿನಿಯ ೧ನೇಯ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಹುಬ್ಬಳ್ಳಿ:-ವಿಪ್ರ ವ್ಯವಹಾರ ವೇದಿಕೆಯ ಹು-ಧಾ ಶಾಖೆ ವತಿಯಿಂದ ಅಗಸ್ತ್ಯ ವಾಹಿನಿಯಿಂದ ೧ ನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ ೨೭ ರಂದು ನಗರದ ವಿದ್ಯಾನಗರದ ಹೆನ್ಸ್ ಹೊಟೇಲ್ ನಲ್ಲಿ ಬ್ರಾಹ್ಮಣ ವ್ಯಾಪಾರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಪ್ರ ವ್ಯವಹಾರ ವೇದಿಕೆಯ ನಿರ್ದೇಶಕರಾದ ಸಾಗರ ಪುರೋಹಿತ ಹೇಳಿದರು‌.

ನಗರದಲ್ಲಿಂದು ಮಾತನಾಡಿದ ಅವರು, ಬ್ರಾಹ್ಮಣ ಉದ್ಯಮಿಗಳು ಪರಸ್ಪರ ಲಾಭಕ್ಕಾಗಿ ಕ್ರಾಸ್ ಸೆಕ್ಟರ್ ಉದ್ಯಮಿಗಳ ನಡುವೆ ಬಾಂಧವ್ಯ ಬೆಳೆಸಲು ಹಾಗೂ ವಿವಿಧ ವರ್ಗದ ಸಣ್ಣ ಪ್ರಮಾಣದ ಉದ್ಯಮಿಗಳು ದೊಡ್ಡ ಪ್ರಮಾಣದ ಉದ್ಯಮ ಸ್ಥಾಪಿಸಲು ಸಹಾಯಕವಾಗುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಬ್ರಾಹ್ಮಣ ವ್ಯಾಪಾರ ಪ್ರಾರಂಭ ಕ್ಕಾಗಿ ನೆಟ್ವರ್ಕಿಂಗ್ ವೇದಿಕೆ ರಚಿಸುವುದು. ನಮ್ಮ ವಾಹಿನಿಗೆ ಹೆಚ್ಚಿನ ಬ್ರಾಹ್ಮಣ ವ್ಯಾಪಾರ ಸದಸ್ಯರನ್ನು ವಿಸ್ತರಿಸುವುದು. ಉದ್ಯಮದ ಗೆಳೆಯರಿಂದ ಪರಿಣತಿ, ಸಲಹೆ ಮತ್ತು ಉತ್ತಮ ಅಭ್ಯಾಸಗಳಿಗೆ ಪ್ರವೇಶ ನೀಡುವುದು, ವಿದ್ಯಾರ್ಥಿಗಳು, ಪದವೀಧರರು ವ್ಯವಹಾರ ತಗೆದುಕೊಳ್ಳಲು ಮತ್ತು ಜೀವನದಿಂದ ಬೆಳೆಯಲು ಭವಿಷ್ಯದ ಯೋಜನೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಾಹಿನಿ ಬೆಳೆಸುವ ಉದ್ದೇಶವನ್ನು ಈ ಸಮಾವೇಶ ಒಳಗೊಂಡಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ನಿರ್ದೇಶಕರಾದ ವೈಶಾಲಿ ಪಾಟೀಲ್, ಸದಸ್ಯರಾದ ಶಂಕರ್ ಪಾಟೀಲ್, ವೆಂಕಟೇಶ, ಅಶೋಕ ಕುಲಕರ್ಣಿ ಉಪಸ್ಥಿತರಿದ್ದರು.

 ವರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!