Ad imageAd image

ಗುಜರಾತ್ ಟೈಟನ್ಸ್ ಗೆ 3 ವಿಕೆಟ್ ಜಯ: ಅಂಕ ಪಟ್ಟಿಯಲ್ಲಿ 1 ನೇ ಸ್ಥಾನ

Bharath Vaibhav
ಗುಜರಾತ್ ಟೈಟನ್ಸ್ ಗೆ 3 ವಿಕೆಟ್ ಜಯ: ಅಂಕ ಪಟ್ಟಿಯಲ್ಲಿ 1 ನೇ ಸ್ಥಾನ
WhatsApp Group Join Now
Telegram Group Join Now

ಮುಂಬೈ: ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 56 ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಕವರ್ತ್ ಲೂಯಿಸ್ ನಿಯಮದ ಪ್ರಕಾರ 3 ವಿಕೆಟ್ ಗಳಿಂದ ಮಣಿಸಿತು.

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 155 ರನ್ ಗಳಿಸಿತು. ಸುಲಭದ ಗೆಲುವಿನ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 19 ಓವರುಗಳಲ್ಲಿ 147 ರನ್ ಗಳಿಸಿ ತಂಡ ಡೆಕವರ್ತ್ ಲೂಯಿಸ್ ನಿಯಮದ ಪ್ರಕಾರ 3 ವಿಕೆಟ್ ಗಳಿಂದ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ತಂಡ ತಾನಾಡಿದ 11 ಪಂದ್ಯಗಳಿಂದ 8 ರಲ್ಲಿ ಗೆದ್ದು 3 ರಲ್ಲಿ ಸೋತು 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.

ಸ್ಕೋರ್ ವಿವರ:

 ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 8 ವಿಕೆಟ್ ಗೆ 155

ವಿಲ್ ಜಾಕ್ಸ್ 53 ( 35 ಎಸೆತ, 5 ಬೌಂಡರಿ, 3 ಸಿಕ್ಸರ್), ಸೂರ್ಯಕುಮಾರ ಯಾದವ್ 35 (24 ಎಸೆತ, 5 ಬೌಂಡರಿ)

ಕ್ರೋಬಿನ್ ಬೋಚ್ 27 ( 22 ಎಸೆತ, 1 ಬೌಂಡರಿ, 2 ಸಿಕ್ಸರ್) ಸಾಯಿ ಕಿಶೋರ್ 34 ಕ್ಕೆ 2) ರಷಿದ್ ಖಾನ್ 21 ಕ್ಕೆ 1)

ಗುಜರಾತ್ ಟೈಟನ್ಸ್ 19 ಓವರುಗಳಲ್ಲಿ  7 ವಿಕೆಟ್ ಗೆ 147

ಶುಭಮಾನ್ 43 ( 46 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಶ್ ಬಟ್ಲರ್ 30 (27 ಎಸೆತ, 3 ಬೌಂಡರಿ, 1 ಸಿಕ್ಸರ್) ಶೆರಪೆನ್ ರುದರಪೋರ್ಡ್ 28 ( 15 ಎಸೆತ, 2 ಬೌಂಡರಿ, 2 ಸಿಕ್ಸರ್) ಜಸಪ್ರೀತ್ ಬೂಮ್ರಾ 19 ಕ್ಕೆ 2, ಟ್ರೆಂಟ್ ಬೋಲ್ಟ್ 22 ಕ್ಕೆ 2)

ಪಂದ್ಯ ಶ್ರೇಷ್ಠ: ಶುಭಮಾನ್ ಗಿಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!