——————————-ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆಯವರ ಉಪಸ್ಥಿತಿಯಲ್ಲಿ ಚಾಲನೆ
ನಿಪ್ಪಾಣಿ: ನಿಪ್ಪಾಣಿ ಮತಕ್ಷೇತ್ರದಲ್ಲಿ 2014 ರಿಂದ ಇದುವರೆಗೆ ಸಾರ್ವಜನಿಕರ ಕುಂದು ಕೊರತೆ, ಸಮಸ್ಯೆ ನೀಗಿಸಲು ತಾವು ಪ್ರಾಮಾಣಿಕ ಕಾರ್ಯನಿರ್ವಹಿಸಿದ್ದು ಕ್ಷೇತ್ರದಲ್ಲಿಯ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಮಂದಿರ ಜೀರ್ಣೋದ್ಧಾರ, ಸಮುದಾಯ ಭವನ, ಶಾಲಾ ಕಟ್ಟಡ ನಿರ್ಮಾಣ,ವಿಧವೆ, ವೃದ್ಧರಿಗೆ ಪಿಂಚಣಿ ಸೌಲಭ್ಯ, ನೀರಾವರಿ ಯೋಜನೆ, ಸೇರಿದಂತೆ ಕೋಟ್ಯಾಂತರ ರೂಪಾಯಿಗಳ ಅನುದಾನ ತಂದು ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗಿದೆ.
ನಿಪ್ಪಾಣಿ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಜೊಲ್ಲೆ ದಂಪತಿಗಳು ಬದ್ಧರಾಗಿರುವುದಾಗಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು. ನಿಪ್ಪಾಣಿ ತಾಲೂಕಿನ ಮಾಂಗುರು ಗ್ರಾಮದಲ್ಲಿ 2 ಕೋಟಿ 20 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಾರಂಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾಂಗುರು ಬಾರವಾಡ ರಸ್ತೆಗಾಗಿ ಎರಡು ಕೋಟಿ ಮಂಜೂರಾಗಿದ್ದು ಶಾಸಕಿ ಶಶಿಕಲಾ ಜೊಲ್ಲೆಯವರ ಉಪಸ್ಥಿತಿಯಲ್ಲಿ ಗ್ರಾಮದ ಗಣ್ಯರಿಂದ ಚಾಲನೆ ನೀಡಲಾಯಿತು. ನಂತರ ನಡೆದ ಸಮಾರಂಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜಿಲ್ಲೆಯವರ ಹಸ್ತದಿಂದ ಗ್ರಾಮದ ಸಿದ್ಧಿವಿನಾಯಕ ಮಂದಿರಕ್ಕಾಗಿ 5 ಲಕ್ಷ ,ವಾಲ್ಮೀಕಿ ಮಂದಿರ ಸಮುದಾಯ ಭವನಕ್ಕಾಗಿ 5 ಲಕ್ಷ. ಹಾಗೂ ಪಾರ್ಶ್ವನಾಥ ಜನಮಂದಿರಕ್ಕಾಗಿ 5 ಲಕ್ಷ ರೂಪಾಯಿಗಳ ಮಂಜೂರಿ ಪತ್ರ ನೀಡಿದರು.
ಅದೇ ರೀತಿ ಸಿಎಂ ಪರಿಹಾರ ನಿಧಿಯಿಂದ ಮಂಜೂರಾದ 13 ಸಾವಿರ ರೂಪಾಯಿ ಹಾಗೂ ವೈಯಸ್ಕರಿಗಾಗಿ ಮಂಜೂರಾದ ಪಿಂಚಣಿ ಪತ್ರಗಳನ್ನು ವಿಶ್ವಕರ್ಮ ಯೋಜನೆಯಡಿ 52 ಫಲಾನುಭವಿಗಳಿಗೆ ವ್ಯವಸಾಯ ಕಿಟ್ಟುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕುಮಾರ ಬನ್ನೇ , ರಾಜು ಪಾಟೀಲ, ಮಾತನಾಡಿದರು ಸಮಾರಂಭದಲ್ಲಿ ಹಾಲ್ ಶುಗರ್ ನಿರ್ದೇಶಕ ರಮೇಶ್ ಪಾಟೀಲ್ ಶ್ರೀಕಾಂತ ಕಣಗಲಿ ನಿತೀಶ್ ಸಂದೀಪ್ ಪಾಟೀಲ್ ರಾಜು ಕುರಾಡೆ, ದೇವದತ್ತ ರಾಜಹಂಸ, ಸುಜಾತ ಚೌಗುಲೆ ಸಂಜಯ್ ಚೌಗುಲೆ ರಾಜು ಭದರಗಡೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




