Ad imageAd image

ರಾಜ್ಯದಲ್ಲಿ ಪ್ರತಿದಿನ 2 ಅತ್ಯಾಚಾರ ಪ್ರಕರಣ ದಾಖಲು : ವರದಿ

Bharath Vaibhav
ರಾಜ್ಯದಲ್ಲಿ ಪ್ರತಿದಿನ 2 ಅತ್ಯಾಚಾರ ಪ್ರಕರಣ ದಾಖಲು : ವರದಿ
RAPE
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯ ಮೇಲಿನ ಅತ್ಯಚಹಾರ, ಲೈಂಗಿಕ ದೌರ್ಜನ್ಯ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣ ನೋಡಿದರೆ ಬೆಚ್ಚಿ ಬೀಳಿಸುವಂತಿದೆ.

ರಾಜ್ಯದಲ್ಲಿ ಪ್ರತಿದಿನ 2 ಅತ್ಯಾಚಾರ ಪ್ರಕರಣ, 16 ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ.ಕಳೆದ ಎರಡು ವರ್ಷಗಳಲ್ಲಿ 1888 ರೇಪ್ ಕೇಸ್ ಗಳು ದಾಖಲಾಗಿವೆ. ಆದರೆ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯವಾಗಿದೆ.

ಕಳೆದ ಎರಡುವರೆ ವರ್ಷಗಳಲ್ಲಿ 1888 ಅತ್ಯಾಚಾರ ಪ್ರಕರಣಗಳಲ್ಲಿ 2143 ಆರೋಪಿಗಳನ್ನು ಬಂಧಿಸಲಾಗಿದೆ. 2025ರ ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 549 ಪ್ರಕರಣಗಳಲ್ಲಿ 407 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.2024ರಲ್ಲಿ 739 ಪ್ರಕರಣಗಳಲ್ಲಿ 969 ಹಾಗೂ 2023ರಲ್ಲಿ 600 ಕೇಸ್ ಗಳಲ್ಲಿ 767 ಆರೋಪಿಗಳನ್ನು ಬಂಧಿಸಲಾಗಿದೆ.

ಒಟ್ಟು ದಾಖಲಾಗಿರುವ 1888 ಪ್ರಕರಣಗಳಲ್ಲಿ 2143 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. 83 ಪ್ರಕರಣಗಳು ಖುಲಾಸೆಗೊಂಡಿವೆ ಎಂದು ಗೃಹ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ರಾಜ್ಯದಲ್ಲಿ ಪ್ರತಿದಿನ ಎರಡರಿಂದ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಲೈಂಗಿಕ ಕಿರುಕುಳ, ಗಂಡನಿಂದ ಕಿರುಕುಳ ಪ್ರಕರಣ ಸಂಖ್ಯೆಯೂ ಯಥಾಸ್ಥಿತಿಯಲ್ಲಿದೆ.

ಎರಡೂವರೆ ವರ್ಷಗಳಲ್ಲಿ 16,273 ಪ್ರಕರಣಗಳಿಂದ 16,312 ಆರೋಪಿಗಳನ್ನು ಬಂಧಿಸಲಾಗಿದೆ. ದಿನಕ್ಕೆ ಸರಾಸರಿ 16 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಈ ಪೈಕಿ 189 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಶಕ್ತರಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!