ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘವನ್ನು1976 ರಲ್ಲಿ ಸ್ಥಾಪನೆ ಮಾಡಿ,ಕಾರ್ಮಿಕ ವರ್ಗಕ್ಕಾಗಿ ಹೋರಾಟದ ಮೂಲಕ ತನ್ನ ಪ್ರಾಣವನ್ನೇ ಅರ್ಪಿಸಿದ ಧೀಮಂತ ನಾಯಕ,ಸಂಘದ ಶಕ್ತಿ ದಿವಂಗತ ಕಾಮ್ರೇಡ್,ಎ.ಜಿ.ವಿ. ಪೈಯವರ ಪ್ರೀತಿಯ ಏಕೈಕ ಮಗಳು ಯಾವುದೇ ಆರ್ಥಿಕ ಸಂಪನ್ಮೂಲವಿಲ್ಲದೆ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಲಲಿತಾರೆಡ್ಡಿ ಅವರು ತೀವ್ರ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಜೀವನ್ಮರಣದ ಮಧ್ಯೆ ಬದುಕು ಸಾಗಿಸುತ್ತಿದ್ದ ಆ ಮಹಾತಾಯಿಗೆ ಇಡೀ ಕಾರ್ಮಿಕ ವರ್ಗ ಮುಕ್ತ ಮನಸ್ಸಿನಿಂದ ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದು ಸಂಘಕ್ಕೆ ಒಂದು ದಿನದ ವೇತನ ನೀಡಿ ಅವರ ಚಿಕಿತ್ಸೆಗೆ ಸಹಾಯವಾಗಲು ಸಂಘದ ವತಿಯಿಂದ ಇಂದು ದಿನಾಂಕ:16.04.2025 ರಂದು ಸುಮಾರು ₹ 20 ಲಕ್ಷ ರೂಪಾಯಿ ಚೆಕ್ ಅನ್ನು ಅವರಿಗೆ ಹಸ್ತಾಂತರಿಸಿ ಬೇಗ ಗುಣಮುಖರಾಗುವಂತೆ ಹಾರೈಸಲಾಯಿತು. ಮಾನವೀಯತೆ ತೋರಿದ ಸಮಸ್ತ ಹಟ್ಟಿ ಚಿನ್ನದ ಗಣಿ ಕಾರ್ಮಿಕ ವರ್ಗಕ್ಕೆ ಪೈಯವರ ಕುಟುಂಬ ಚಿರಋಣಿ ಎಂದು ತಿಳಿಸಿದರು.
ವರದಿ : ಶ್ರೀನಿವಾಸ ಮಧುಶ್ರೀ