Ad imageAd image

ರಾಜ್ಯದಿಂದ ಮೊದಲ ಬಾರಿಗೆ ಸಂಸತ್ತು ಪ್ರವೇಶ ಮಾಡಲಿರುವ 20 ಸಂಸದರು

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: 2024 ರ ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಈ ಬಾರಿ ರಾಜ್ಯದಲ್ಲಿ ಬಿಜೆಪಿ 17 ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿವೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ 20ಮಂದಿ ಮೊದಲ ಬಾರಿಗೆ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಲಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಬೆಂ. ಗ್ರಾಮಾಂತರದ ಡಾ.ಸಿ.ಎನ್.ಮಂಜುನಾಥ್, ತುಮಕೂರಿನ ವಿ.ಸೋಮಣ್ಣ, ಮೈಸೂರಿನ ಯದುವೀರ್, ಉಡುಪಿ- ಚಿಕ್ಕಮಗಳೂರಿನ ಕೋಟ ಶ್ರೀನಿವಾಸ ಪೂಜಾರಿ, ಚಿತ್ರದುರ್ಗದ ಗೋವಿಂದ ಕಾರಜೋಳ, ಬೆಳಗಾವಿಯ ಶೆಟ್ಟರ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಹಾವೇರಿಯ ಬೊಮ್ಮಾಯಿ, ಉತ್ತರ ಕನ್ನಡದ ಹೆಗಡೆ ಕಾಗೇರಿ, ದಕ್ಷಿಣ ಕನ್ನಡದ ಕ್ಯಾ.ಬ್ರಿಜೇಶ್ ಚೌಟ, ಕೋಲಾರದ ಮಲ್ಲೇಶ್‌ ಮೊದಲ ಸಲ ಗೆದ್ದಿದ್ದಾರೆ.

ಅದೇ ರೀತಿಯಾಗಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬೀದ‌ರ್ ನ ಸಾಗರ್ ಖಂಡ್ರೆ, ರಾಯಚೂರಿನ ಕುಮಾರ ನಾಯಕ್, ಬಳ್ಳಾರಿಯ ತುಕಾರಾಂ, ಚಿಕ್ಕೋಡಿಯ ಪ್ರಿಯಾಂಕಾ, ದಾವಣಗೆರೆಯ ಪ್ರಭಾ, ಗುಲ್ಬರ್ಗಾದ ರಾಧಾಕೃಷ್ಣ, ಕೊಪ್ಪಳದ ರಾಜಶೇಖರ್, ಹಾಸನದ ಶ್ರೇಯಸ್, ಚಾಮರಾಜ ನಗರದ ಸುನೀಲ್ ಬೋಸ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!