ರಾಜ್ಯದಲ್ಲಿ ಭತ್ತದ ಬೆಳೆಗೆ ಭಾರೀ ಪ್ರಸಿದ್ಧಿಯಾಗಿದ್ದ ಕೃಷಿ ಸಂಪದ್ಭರಿತವಾಗುದ್ದ ಈ ಗ್ರಾಮವು ಇದೀಗ ಕೈಗಾರಿಕೆಗಳಿಂದ ಕಲುಷಿತಗೊಂಡು, ಇಲ್ಲಿನ 200ಕ್ಕೂ ಅಧಿಕ ಜನರು ಕ್ಯಾನ್ಸರ್‌ನಿಂದ ನರಳುತ್ತಿದೆ. ಕಾರ್ಖಾನೆಗಳಿಂದ ಉಂಟಾದ ಮಾಲಿನ್ಯದಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೈತುಂಬಾ ಸಂಬಳ ಸಿಗುವ ಕೆಲಸ ಸಿಗತ್ತದೆ ಎಂದು ಸಂತಸಪಟ್ಟಿದ್ದರು. ಕಾರ್ಖಾನೆಗಳ ನಿರ್ಮಾಣಕ್ಕೆ ಖುಷಿಯಿಂದಲೇ ಜಮೀನು ಬಿಟ್ಟುಕೊಟ್ಟ ಜನರ ಜೀವಕ್ಕೆ ಇದೀಗ ಅದೇ ಕಾರ್ಖಾನೆಗಳು ಮುಳುವಾಗಿವೆಈ ಊರಿನ ಜನರು ಇದೀಗ ಕ್ಯಾನ್ಸರ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಬಲಭದ್ರಪುರಂ ಎಂಬ ಗ್ರಾಮ, ಗ್ರಾಮಸ್ಥರು ಆ ಕಂಪನಿಗಳಲ್ಲಿ ಸಣ್ಣ ಉದ್ಯೋಗಿಗಳಾಗಿ ಮತ್ತು ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇದರಿಂದಾಗಿ ಅಲ್ಲಿನ ಜನರು ಅಭಿವೃದ್ಧಿ ಹೊಂದುವ ಬದಲು ರೋಗಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಸುಮಾರು 10,000 ಜನಸಂಖ್ಯೆ ಇರುವ ಗ್ರಾಮದಲ್ಲಿ ಈಗ ಸುಮಾರು 200 ಕ್ಯಾನ್ಸರ್ ಪೀಡಿತರಿದ್ದಾರೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ. ಸ್ಥಳೀಯರ ಪ್ರಕಾರ, ಬಲಭದ್ರಪುರಂನಲ್ಲಿ ಮಾಲಿನ್ಯಮಿತಿ ಮೀರಿದೆ. ಈ ಗ್ರಾಮದ ಸುತ್ತಲಿನ ಈ ಕಾರ್ಖಾನೆಗಳಿಂದ ಬರುವ ತ್ಯಾಜ್ಯ ನೀರು ಕಾಲುವೆ ಮತ್ತು ಅಂತರ್ಜಲ ಸೇರುತ್ತಿದೆ. ಮತ್ತು ಕಾರ್ಖಾನೆಗಳಿಂದ ಬರುವ ಹೊಗೆಯಿಂದ ಶುದ್ಧಗಾಳಿ ಮಾಲಿನ್ಯವಾತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಲಭದ್ರಪುರಂನ ಜನರು ಕಳೆದ 2 ವರ್ಷಗಳಿಂದ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕಳೆದ 2 ವರ್ಷಗಳಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಕಳೆದ ಒಂದು ವರ್ಷದಲ್ಲಿ 21 ಜನರು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಬಲಭದ್ರಾಪುರಂ ಗ್ರಾಮದ ಈ ಪರಿಸ್ಥಿತಿಗೆ ಬಲಭದ್ರಪುರಂ ಸುತ್ತಮುತ್ತಲಿನ ಕಾರ್ಖಾನೆಗಳೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು. ಜನರನ್ನು ರಕ್ಷಿಸುವಂತೆ ಅವರು ಕೇಳಿದ ನಂತರ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿತು. ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಳ್ಳಿಯ ಎಲ್ಲರಿಗೂ ಕ್ಯಾನ್ಸರ್ ತಪಾಸಣೆ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಪೂರ್ವ ಗೋದಾವರಿ ಜಿಲ್ಲಾಧಿಕಾರಿ ಪ್ರಶಾಂತಿ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವೈದ್ಯರು ಮತ್ತು ಕ್ಯಾನ್ಸರ್ ತಜ್ಞರು ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರವನ್ನು ಆಯೋಜಿಸಿದರು. 31 ವೈದ್ಯಕೀಯ ತಂಡಗಳು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿವೆ. ಆ ಗ್ರಾಮದಲ್ಲಿ ಈಗಾಗಲೇ 23 ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಅಂತರ್ಜಲ ಮತ್ತು ವಾಯು ಮಾಲಿನ್ಯದಿಂದಾಗಿ ಕ್ಯಾನ್ಸರ್ ಹರಡುವಿಕೆ ಸಂಭವಿಸಿದೆ ಎಂಬ ಅನುಮಾನಗಳಿದ್ದು, ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.