ರಾಮದುರ್ಗ :-ಇಂದು ಲೋಕಸಭಾ ಚುನಾವಣೆಯ 2024ರ ನಿಮಿತ್ಯವಾಗಿ ಮತದಾನ ಜಾಗೃತಿ ತಾಲೂಕ ಸ್ವಿeಪ್ ಸಮಿತಿ ರಾಮದುರ್ಗ ವತಿಯಿಂದ ವಿಶೇಷ ಚೇತನರಿಂದ ಬೈಕ್ ರ್ಯಾಲ್ಲಿ ಮುಖಾಂತರ ಮತದಾನ ಜಾಗೃತಿ ಮೂಡಿಸಲಾಯತು ಈ ಕಾರ್ಯಕ್ರಮವನ್ನುತಾಲೂಕ ದಂಡಾಧಿಕಾರಿಗಳಾದ ಸುರೇಶ ಚಾವಲಾರ್, ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಬಸವರಾಜ ಐನಾಪುರ, ಮತ್ತು ತಾಲೂಕ ವಿಕಲಚೇತನರ ಸಂಯೋಜಕರಾದ ಗೀತಾ ಎಂ ಅಬ್ಬಿಗೇರಿ ಚಾಲನೆ ನೀಡಿದರು.
ತಾಲೂಕಾ ಸ್ವೀಪ್ ಸಮೀತಿ, ತಾಲೂಕಾ ಆಡಳಿತ ಹಾಗೂ ತಾಲೂಕ ಪಂಚಾಯತ ರಾಮದುರ್ಗ ಮತ್ತು ಪುರಸಭೆ ರಾಮದುರ್ಗ ರವರ ಸಂಯುಕ್ತ ಆಶ್ರಯದಲ್ಲಿ ತಾಪಂ ಕಾರ್ಯಾಲಯದಿಂದ ಸರಕಾರಿ ಆಸ್ಪತ್ರೆ ಸರ್ಕಲ್ ವೃತ್ತದ ದಿಂದ ವಿಶೇಷ ಚೇತನರು ಅಂಗವಿಕಲರಗಳಿಂದ ತ್ರೀಚಕ್ರ ವಾಹನಗಳ ಮೂಲಕ ಜನಸಾಮಾನ್ಯರಿಗೆ ಮತದಾನ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಶೇಷವಾದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ತಾಲೂಕಾ ದಂಡಾಧಿಕಾರಿಗಳು ಹಾಗೂ ಸ್ವೀಪ್ ಸಮೀತಿ ಅಧ್ಯಕ್ಷರು ಹಾಗೂ ಬಸವರಾಜ ಐನಾಪುರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ರಾಮದುರ್ಗ .ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆಯನ್ನು ನೀಡಿದರು.
ಪಟ್ಟಣದ ಸರಕಾರಿ ಆಸ್ಪತ್ರೆ ಸರ್ಕಲ್ ಮೂಲಕ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಗೂ ಮಿನಿವಿಧಾನ ಸೌಧ ಕ್ರಾಸ್ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣವೃತ್ತದವರೆಗೆ ವಿಶೇಷ್ ಚೇತನರು ತ್ರೀಚಕ್ರ ವಾಹನದಲ್ಲಿ ಘೋಷ ವಾಕ್ಯಗಳನ್ನು ಕುಗುತ್ತಾ ಮತ್ತು ಪರುಸಭೆಯ ಸ್ವಚ್ಛ ಭಾರತ ವಾಹನದ ಜಿಂಗಲ್ಸಗಳನ್ನು ಬಳಕೆ ಮಾಡಿ ಜನಸಾಮಾನ್ಯರಿಗೆ ಮತದಾನ ಜಾಗೃತಿಯನ್ನು ಮೂಡಿಸಲಾಯಿತು. ಮತ್ತು ಸಂಗೊಳ್ಳಿ ರಾಯಣ್ಣ ಸರ್ಕಲ್ ದಲ್ಲಿ ತ್ರಿಚಕ್ರ ವಾಹನ ಸರಪಳಿ ಮಾಡುವ ಮೂಲಕ ಮತದಾನ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಆದ ಸುರೇಶ ಚವಲಾರ್, ತಾಲೂಕ ಪಂಚಾಯತ ಕಾರ್ಯನಿರ್ವಾಹ ಅಧಿಕಾರಿಗಳು ಬಸವರಾಜ ಐನಾಪೂರ, ಪುರಸಭೆಯ ಮುಖ್ಯಾಧಿಕಾರಿ ಗುಡದಾರಿ,ವಿಕಲಚೇತನರ ಸಂಯೋಜಕರು ಗೀತಾ ಎಂ ಅಬ್ಬಿಗೇರಿ, ತಾಲೂಕಿನ ಎಲ್ಲ vrw urw ಮತ್ತು ವಿಕಲಚತನರು ಹಾಜರಿದ್ದರು.
ವರದಿ:-ಮಂಜುನಾಥ ಕಲಾದಗಿ