ಚಾಮರಾಜನಗರ: 2025-26ನೇ ಸಾಲಿನ ಆಯವ್ಯಯ ಸಭೆಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್ ಅವರು ಇಂದು 1.84 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.
ನಗರದ ನಗರಸಭಾ ಕಚೇರಿ ಸಭಾಂಗಣದಲ್ಲಿ ಬಜೆಟ್ ಸಭೆಯಲ್ಲಿ ಮಂಡಿಸಿದ ಅವರು, ಪ್ರಾರಂಭಿಕ ಶುಲ್ಕ ಮತ್ತ ಇತರೆ ಆಧಾಯ ಮೂಲಗಳಿಂದ ಬರುವ ಆಧಾಯ ಒಟ್ಟು 5,942.40 ಲಕ್ಷ ರೂಗಳಲ್ಲಿ 5758. 38 ಖರ್ಚುಗಳು ಆಯವ್ಯಯವನ್ನು ಮಂಡಿಸಿದರು….
ಬಜೆಟ್ ಸಭೆಯಲ್ಲಿ ನಗರದ ಬಹುತೇಕ ಕೆರೆ ಕಟ್ಟೆಗಳು ಇತರೆ ವ್ಯಕ್ತಿಗಳು ಅಕ್ರಮಿಸಿಕೂಂಡಿರುವ ಬಗ್ಗೆ ಕಾನೂನು ರೀತಿಯ ಕ್ರಮಕ್ಕೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯದ ಬಗ್ಗೆ ನಗರ ಸಭೆ ಸದಸ್ಯ ಖಲೀಲ್ ಉಲ್ಲಾ ಆಕ್ರೋಶ ಹೊರಹಾಕಿದರು…
ಕೆರೆ ಕಟ್ಟೆಗಳ ಸಂರಕ್ಷಣೆಗೆ ಮುಂದೆ ಬಾರದೆ ಅಕ್ರಮ ಎಸಗುತ್ತಿರುವವರ ಪರವಾಗಿ ನಿಂತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣವೇ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದು ಕೊಳ್ಳಳಿದ್ದ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಲು ತಯಾರಿ ಮಾಡಲಾಗುತ್ತಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಮಮತಾ, ಪೌರಾಯುಕ್ತ ರಾಮದಾಸ್ ಸೇರಿದಂತೆ ಇತರೆ ಸದಸ್ಯರುಗಳು ಅಧಿಕಾರಿಗಳು, ಸಿಬ್ಬಂದಿವರ್ಗದವರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ