ಬಾದಾಮಿ: 2025 ರ ಹೋಳಿಹುಣ್ಣಿಮೆ ಹಾಗೂ ರಂಜಾನ್ ಹಬ್ಬದ ಪೂರ್ವ ಭಾವಿ ಸಭೆ ಬಾಗಲಕೋಟ ಪೊಲೀಸ್ ಮೇಲಾಧಿಕಾರಿಗಳು ಡಿ ವಾಯ್ ಎಸ್ ಪಿ ವಿಶ್ವನಾಥ್ .ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆಯಿತು.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿ ಪಟ್ಟಣ ಹಾಗೂ ನಗರಗಳಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಅಧಿಕಾರಿಗಳು ಸೂಚನೆ ನೀಡಿದರು

ಮುಖ್ಯವಾಗಿ ಈ ಹಬ್ಬದಲ್ಲಿ ಹತ್ತನೇ ತರಗತಿ ಮಕ್ಕಳ ಪರೀಕ್ಷೆ ಇದ್ದು ತಾವೆಲ್ಲರೂ ಸಹಕಾರ ನೀಡಬೇಕು. ಯಾವುದೇ ಶಾಲಾ ಮಕ್ಕಳಿಗೆ ತೊಂದರೆ ನೀಡಬಾರದು ಅವರು ಕೂಡಾ ನಿಮ್ಮ ಮಕ್ಕಳು
ಹಬ್ಬ ಪ್ರತಿವರ್ಷ ಬರುತ್ತದೆ. ಪರೀಕ್ಷೆ ಎಂಬುದು ಅವರ ಜೀವನದ ಪರೀಕ್ಷೆ.ನಂತರ ಸಭೆಗೆ ಆಗಮಿಸಿದ ಜನರು ಹೋಳಿ ಹುಣ್ಣಿಮೆ ಹಬ್ಬದ ಆಚರಣೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಾದಾಮಿ ತಾಲೂಕ ಅಬಕಾರಿ
ಅಧಿಕಾರಿಗಳ ನಿರ್ಲಕ್ಷ ಕರ್ತವ್ಯ ಸುತ್ತು ಹಳ್ಳಿಯಲ್ಲಿ ಎದ್ದು ಕಾಣುತ್ತಿದೆ ಜನರು ಅಧಿಕಾರಿಗಳ ಮುಂದೆ ವ್ಯಕ್ತ ಪಡಿಸಿದ ಧೃಶ್ಯ ನೀವೇ ನೋಡಿ. ಈ ಸಂದರ್ಭದಲ್ಲಿ ಬಾದಾಮಿ ತಾಲೂಕ
ಬಾದಾಮಿ ಸಿ ಪಿ ಐ ಕರಿಯಪ್ಪ ಬನ್ನಿ, ಪುರಸಭೆ ಮುಖ್ಯಾಧಿಕಾರಿಗಳು ಬಂದೇನವಾಜ್ ಡಾoಗೆ,ಪಿ ಎಸ್ ಐ ವಿಠ್ಠಲ್ ನಾಯಿಕ್. ಸಿಬ್ಬಂದಿಗಳು ಹಾಗೂ ಬಾದಾಮಿ ಪಟ್ಟಣದ,ಸುತ್ತು ಮುತ್ತು ಹಳ್ಳಿಯ ಹಿರಿಯರು ಯುವಕರು ಭಾಗಿಯಾಗಿದ್ದರು
ವರದಿ. ಎಸ್ ಎಸ್ ಕವಲಾಪುರಿ




