ಹುಬ್ಬಳ್ಳಿ : ಮುಂದಿನ ವರ್ಷ 2025 ಫೆಬ್ರವರಿ 4 ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಸ್ಥೆ ಉದ್ಘಾಟನೆ ಆಗಲಿದ್ದು, ಸುಮಾರು 1008 ಸ್ವಾಮೀಜಿಗಳಿಂದ ಪಾದಪೂಜೆ ಮಾಡಿ ಉದ್ಘಾಟನೆ ಮಾಡುತ್ತೇವೆ ಎಂದು ಬಿಜೆಪಿಯ ಮಾಜಿ ಸಚಿವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ತಿಳಿಸಿದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 18 ಸಾಧುಸಂತರ ಪಾದ ಪೂಜೆ ಮಾಡಿ ಉದ್ಘಾಟನೆ ಮಾಡುತ್ತೇವೆ. ನಮ್ಮ ಸರ್ಕಾರ ಇದ್ದಾಗ ಎರಡು ಬಾರಿ ಮಠಕ್ಕೆ ಹಣ ಬಿಡುಗಡೆ ಮಾಡಿದ್ದೇವೆ ಸದಾನಂದ ಗೌಡ ಹಾಗೂ ಬಸವರಾಜ ಬೊಮ್ಮಾಯಿ 2 ಬಾರಿ ಹಣ ಬಿಡುಗಡೆ ಮಾಡಿದರು ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸಣ್ಣ ಮಟ್ಟಗಳಿವೆ.
ಕ್ರಾಂತಿವೀರ ಬ್ರಿಗೇಡ್ನಿಂದ ಸಣ್ಣ ಮಟ್ಟಗಳಿಗೆ ನ್ಯಾಯ ಕೊಡಿಸುವ ಕೆಲಸವಾಗುತ್ತದೆ ನಾನು ಮೀಸಲಾತಿ ಪರವು ಅಲ್ಲ ವಿರೋಧವು ಅಲ್ಲ. ಹಿಂದೂ ಧರ್ಮದ ರಕ್ಷಣೆಗೆ ನಮ್ಮ ಹೋರಾಟ. ಎಂದು ಹುಬ್ಬಳ್ಳಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದರು.
ಇದೇ ವೇಳೆ ಬಕನಾಪುರ ಮಠದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಇನ್ನೂ ವಕ್ಫ್ ವಿಚಾರವಾಗಿ ಜನರು ಹೆದರಿಕೊಂಡಿದ್ದಾರೆ. ಹುಲಿ ಬಂದಾಗ ಸಿಂಹ ಬಂದಾಗ ಜನರು ಹೇಗೆ ಹೆದರುತ್ತಾರೋ ಹಾಗೆ ವಕ್ಫ್ ಹೆಸರು ಬಂದಾಗ ಮಠಾಧೀಶರು ಕೂಡ ಹೆದರಿದ್ದಾರೆ.
ಹಿಂದೂ ಧರ್ಮ ಮಠ ಮಂದಿರ ರಕ್ಷಣೆಗೆ ಕಾಂತ್ರಿವೀರ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತಿದೆ ವಕ್ಫ್ ವಿಚಾರವಾಗಿ ಡಿಸೆಂಬರ್ 20 ರಂದು ಕಲಬುರ್ಗಿ ಬಂದ್ ಗೆ ಕರೆ ಕೊಟ್ಟಿದ್ದೇವೆ.ನಮಗೆ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಕನಾಪುರ ಮಠದ ಸೋಮೇಶ್ವರ ಸ್ವಾಮೀಜಿ ಹೇಳಿಕೆ ನೀಡಿದರು.