ಚಿಂಚೋಳಿ: ಸಿದ್ದಸಿರಿ ಎಥನಾಲ್ ಹಾಗೂ ಪಾವ ಘಟಕ ಚಿಂಚೋಳಿ, ಕಾರ್ಖಾನೆಯ ಸನ್ 2025-26
ನೇ ಸಾಲಿನ ಕಬ್ಬು ನುರಿಸುವ ಹಂಗಾಮವನ್ನು ಪ್ರಾಯೋಗಿಕವಾಗಿ ಉದ್ಘಾಟನೆಯನ್ನು ಬಸವನಗೌಡ ಪಾಟೀಲ್ ಯತ್ನಾಳ್ ಉದ್ಘಾಟಿಸಿದರು. ಪೂರ್ಣ ಪ್ರಮಾಣ ಸಾಮರ್ಥ್ಯದೊಂದಿಗೆ ಮುಂದುವರೆಯಲು ಕೆನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮವನ್ನು ಬಸನಗೌಡ. ಪಾಟೀಲ ಯತ್ನಾಳ ಶಾಸಕರು ವಿಜಯಪೂರ ನಗರ ಹಾಗೂ ಅಧ್ಯಕ್ಷರು ಸಿದ್ದಸಿರಿ ಸಮೂಹ ಸಂಸ್ಥೆಗಳು ವಿಜಯಪೂರ ಹಾಗೂ ಮಾಜಿ ಸಂಸದ ಉಮೇಶ್ ಜಾದವ್ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಅನೇಕ ಮಠಧೀಶರಗಳಾದ ಶ್ರೀ ಚನ್ನವೀರ ಶಿವಾಚಾರ್ಯರು ಹೀರೆಮಠ ಸುಕ್ಷೇತ್ರ ಹಾರಕೂಡ, (ಚಿಂಚೋಳಿ) ಶ್ರೀ ಗುರಪಾದಲಿಂಗ ಮಹಾಶಿವಯೋಗಿಗಳು ವೀರಕ್ತ ಮಠ,ಮುತ್ಯಾನ ಬಬಲಾದ. ಶ್ರೀ ವಿಜಯ ತಮಹಾಂತೇಶ್ವರ ಶಿವಚಾರ್ಯರು ಸಿದ್ದರಾಮೇಶ್ವರ ಸಂಸ್ಥಾನ ಹೀರೆಮಠ,ಚಿಮ್ಮಾದಲಾಯಿ.
ಶ್ರೀ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ವೀರಕ್ತ ಮಠ, (ಭರತನೂರ).
ಶ್ರೀ. ಬಾಲಯೋಗಿ ದತ್ತದಿಗಂಬರ ಶರಣ ಶಂಕರಲಿಂಗ ಮಹಾರಾಜರು, (ಸೋಂತ).
ಶ್ರೀ. ಪಂಪಾಪತಿ ಮರಿ ದೇವರು ಮಹಾಂತೇಶ್ವರ ಮಠ,ಸುಲೇಪೇಟ.ಭಾಗವಹಿಸಲಿದ್ದು ಅದರ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತ ಬಾಂಧವರು. ಕಾರ್ಖಾನೆಯ ಹಿತೈಷಿಗಳು,ಕಬ್ಬು ಕಟಾವು ಹಾಗೂ ಸಾರಿಗೆ ಮಕ್ತದಾರರು,ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರು ಭಾಗವಹಿಸಿದರು ಪೂಜಾ.ಕಾರ್ಯಕ್ರಮದಲ್ಲಿ ಚಿಂಚೋಳಿ ತಾಲೂಕಿನ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ವರದಿ: ಸುನಿಲ್ ಸಲಗರ




